ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮತಗಟ್ಟೆ ಸಂಖ್ಯೆ 19ರಲ್ಲಿ ಪತ್ನಿ ಆಶಾ ಘಾಟಗೆ ಜೊತೆ ಬಂದು ಮಾಜಿ ಶಾಸಕ ಶಾಮ ಘಾಟಗೆ ಅವರು ಮತ ಚಲಾಯಿಸಿದರು.
ನಂತರ ಮತಗಟ್ಟೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಜೊತೆ ದಂಪತಿ ಮತದಾನ ಮಾಡಿ ಮಸಿ ಹಚ್ಚಿಕೊಂಡ ಬೆರಳು ತೋರಿಸುವ ಮೂಲಕ ಕ್ಯಾಮರಾಕ್ಕೆ ಪೋಸು ನೀಡಿದರು.





