ವರದಿ:ಡಾ.ಜಯವೀರ ಎ.ಕೆ ಖೇಮಲಾಪುರ
ಬೆಳಗಾವಿ :ಕುಡಚಿ ಕ್ಷೇತ್ರದ ನೂತನ ಶಾಸಕರಾಗಿ ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಭರವಸೆಯ ನಾಯಕ ಶ್ರೀ ಮಹೇಂದ್ರ ತಮ್ಮಣ್ಣವರ ಅವರು 25243 ಮತಗಳ ಅಂತರದಿಂದ ಬಿ.ಜೆ.ಪಿ.ಯ ಪ್ರಬಲ ಪ್ರತಿಸ್ಪರ್ಧಿ ಮಾಜಿ ಶಾಸಕ ಶ್ರೀ ಪಿ.ರಾಜೀವ ಅವರನ್ನು ಪರಾಭವಗೊಳಿಸಿ ಐತಿಹಾಸಿಕ ಗೆಲುವಿನ ನಗೆ ಬೀರಿದ ಪ್ರಯುಕ್ತ ಖೇಮಲಾಪುರದ ಪಕ್ಷದ ನಿಷ್ಠಾವಂತ ಯುವ ಮುಖಂಡರು,ಅಭಿಮಾನಿಗಳು, ಹಾಗೂ ಕಾರ್ಯಕರ್ತರು ಇತ್ತೀಚೆಗೆ ಅಲಖನೂರ ಬೀರಪ್ಪನ ಮಡ್ಡಿಯಲ್ಲಿರುವ ಶ್ರೀ ಮಹೇಂದ್ರ ತಮ್ಮಣ್ಣವರ ನಿವಾಸಕ್ಕೆ ತೆರಳಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹೇಂದ್ರ ತಮ್ಮಣ್ಣವರ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ ಮಹೇಂದ್ರ ತಮ್ಮಣ್ಣವರ ಅವರ ಧರ್ಮಪತ್ನಿ ಶ್ರೀಮತಿ ಸಚಿನಾ ಮಹೇಂದ್ರ ತಮ್ಮಣ್ಣವರ ಅವರು ತುಂಬು ಹೃದಯದಿಂದ ಅಭಿನಂದಿಸಿದರು.ಈ ಸಂದರ್ಭದಲ್ಲಿ ಯುವ ನಾಯಕರಾದ ಶ್ರೀ ಕಾರ್ತಿಕ ಪಾಲಭಾವಿ, ಶ್ರೀ ಸಿದ್ದು ಸನದಿ,ಶ್ರೀ ಸಿದ್ದು ನಾಗರಾಳ, ಶ್ರೀ ನಾನಪ್ಪ ಹಾಲಪ್ಪನವರ, ಸಿದ್ದು ಕೋಳಿ, ಚಿದಾನಂದ ದುಪದಾಳ,ನಂದೇಶ್ವರ ಪಾಲಭಾವಿ, ಆನಂದ ವಡಗಿ,ಅನೀಲ ದಳವಾಯಿ, ಹಾಗೂ ನೇಮಿನಾಥ ಶಿರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು..





