ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಬಿ.ಆರ್ ದರೂರ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕವು ವಾರ್ಷಿಕ ಶಿಬಿರವನ್ನು ದತ್ತು ಗ್ರಾಮ ಅಳಗವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಾಳೆಯಿಂದ ಮೇ 29 ರ ವರೆಗೆ ಆಯೋಜಿಸಿದ್ದಾರೆ.
ಶ್ರೀ ವೃಷಬೇಂದ್ರ ಶಿಕ್ಷಣ ಸಂಸ್ಥೆಯ
ಅಧ್ಯಕ್ಷರಾದ ಶ್ರೀ ಗಿರೀಶ ದರೂರ ಉದ್ಘಾಟಕರಾಗಿ ಆಗಮಿಸಲಿದ್ದಾರೆ.ಅಳಗವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಶ್ರೀ ಏಕನಾಥ ಪಡಚೆ ಅಧ್ಯಕ್ಷತೆ ವಹಿಸಲಿದ್ದಾರೆ.ಶ್ರೀ ವೃಷಬೇಂದ್ರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ಆರ್.ಎಸ್. ಯಲಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಸಂಸ್ಥೆಯ ಆಡಳಿತಾಧಿಕಾರಿ ಡಾ.ವಿ.ಎಸ್. ಮಾಳಿ,ಪ್ರಾಚಾರ್ಯ ಡಾ.ಪಿ.ಬಿ.ನರಗುಂದ,ಅಳಗವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್.ಎನ್ ಹೂವಣ್ಣವರ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕುಡಚಿ ಬ್ಲಾಕ್ ಕಾಂಗ್ರೆಸ್ ಸಮೀತಿಯ ಅಧ್ಯಕ್ಷ ಶ್ರೀ ರೇವಣ್ಣ ಸಿದ್ದಪ್ಪ ಸರವ ಉಪಸ್ಥಿತ ಇರಲಿದ್ದಾರೆ.ಎಂದು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಜನಾಧಿಕಾರಿಗಳಾದ ಡಾ.ವಿನೋದ ಕಾಂಬಳೆ, ಹಾಗೂ ಪ್ರೊ.ಎ.ಡಿ.ಹೊನಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*




