ಹಳ್ಳೂರ .ಗ್ರಾಮದಲ್ಲಿ 11ವರ್ಷಕೊಮ್ಮೆ ಜರುಗುತ್ತಿರುವ ಶ್ರೀ ದ್ಯಾಮವ್ವಾದೇವಿ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಪ್ರಥಮ ದಿನದಂದು ಶ್ರೀ ದ್ಯಾಮವ್ವಾದೇವಿಯ ಮೂರ್ತಿಯ ಮೆರವಣಿಗೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಸೋಮವಾರದಂದು ಮೂರೂರು ಗ್ರಾಮದ ಹಿರಿಯರು ಸಂಭ್ರಮದಿಂದ ಚಾಲನೆ ನೀಡಿದರು.
ಸೋಮವಾರ ಮುಂಜಾನೆ ಹಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ದ್ಯಾಮವ್ವಾದೇವಿಯ ಮೂರ್ತಿಗೆ ವಿಷೇಶ ಪೂಜೆ ಹಾಗೂ ಪುಷ್ಪಾರ್ಚಣೆ ಮಾಡಿ ದೇವಿಯ ಮೆರವಣೆಗೆಗೆ ಹಿರಿಯರು ಚಾಲನೆ ನೀಡಿದರು. ಸಾವಿರಾರು ಮಹಿಳೆಯರು ಕುಂಭಮೇಳ ದೊಂದಿಗೆ ಗ್ರಾಮದ ಕನ್ನಡ ಶಾಲೆ ಅಗಸಿಯಿಂದ ಶ್ರೀ ಬಸವೇಶ್ವರ ಓಣಿಯ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದ್ಯಾಮವ್ವಾದೇವಿ ಮಂದಿರಕ್ಕೆ ಅಂತ್ಯಗೊಂಡಿತು. ನಂತರ ಹೋಮ ಹವನದೊಂದಿಗೆ ದ್ಯಾಮವ್ವಾದೇವಿಯ ಮೂರ್ತಿ ಪ್ರತಿಸ್ಥಾಪನೆ ಜರುಗಿತು.
ಮೆರವಣಿಗೆಯಲ್ಲಿ ಯುವಕರು ಡೊಳ್ಳಿನ ತಾಳಕ್ಕೆ ಹೆಜ್ಜೆ ಹಾಕಿ ಪರಸ್ಪರ ಬಂಡಾರ ಏರಚಿ ಸಂಭ್ರಮಿಸಿದರು. ಭಕ್ತರು ಬಂಡಾರದಲ್ಲಿ ಮಿಂದೆದ್ದಿದ್ದರು ಹಳ್ಳೂರ, ಶಿವಾಪೂರ, ಕಪ್ಪಲಗುದ್ದಿ ಗ್ರಾಮದ ಮಹಿಳೆಯರು ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ನೈವೇದ್ಯ ಅರ್ಪಿಸಿದರು.
ದ್ಯಾಮವ್ವಾದೇವಿ ಮತ್ತು ಮಹಾಲಕ್ಷ್ಮೀ ದೇವಿಗೆ ಭಕ್ತರು ಸೋಮವಾರ ಮುಂಜಾನೆ ರಬಕವಿ-ಬನಹಟ್ಟಿ ಹತ್ತಿರದ ಕೃಷ್ಣಾ ನದಿಯಿಂದ ಎತ್ತಿನ ಚಕ್ಕಡಿ ಗಾಡಿಯಲ್ಲಿ ನೀರು ತಂದು ಸಮರ್ಪಿಸಿದರು
ಕಳಸಾರೋಹಣ: ಹಳ್ಳೂರ ಗ್ರಾಮದಲ್ಲಿನ ದ್ಯಾಮವ್ವಾದೇವಿ, ಮಹಾಲಕ್ಷ್ಮಿ ದೇವಿ ದೇವಸ್ಥಾನ ಹಾಗೂ ವಿಠ್ಠಲ ರುಕ್ಮಿಣಿ ದೇವಸ್ಥಾದ ಕಳಸಾರೋಹಣ ಕಾರ್ಯಕ್ರಮವನ್ನು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮಿಜಿಗಳ ಸಾನ್ನಿಧ್ಯದಲ್ಲಿ ಅಭಿಷೇಕ ಹೋಮ ಹವನ ದೊಂದಿಗೆ ಜರುಗಿತು. ಈ ಸಮಯದಲ್ಲಿ ಹಳ್ಳೂರ, ಕಪ್ಪಳಗುದ್ದಿ, ಶಿ ವಾಪೂರ ಗ್ರಾಮದ ಗುರು ಹಿರಿಯರೂ ಸಹಸ್ರಾರು ಬಕ್ತ ಸಮೂಹ ಕೂಡಿತು. ಸಂಜೆ ಸಮಯದಲ್ಲಿ ಮೇಘ ರಾಜನು ಗುಡುಗು ಸಿಡಿಲಿನೊಂದಿಗೆ ಆರ್ಬಟಿಸುತ್ತಾ ಮಳೆ ಆಗಿ ಭೂಮಿಯನ್ನು ತಂಪುಗೊಳಿಸಿತು.ಗ್ರಾಮದ ರಸ್ತೆ ಬದಿಯಲ್ಲಿ ರಾರಾಜಿಸುತ್ತಿರುವ ಸಾಕಷ್ಟು ಬ್ಯಾನರ್ ಗಳು ನೆಲಕ್ಕೆ ಅಪ್ಪಳಿಸಿವೆ.ಮಂಗಳವಾರ ಸಾಯಂಕಾಲ ರಥೋತ್ಸವ ಜರುಗುವುದು.





