ಸಿಎಂ ಸಿದ್ದರಾಮಯ್ಯ ಅವರ ಸರಳತನ:ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ

Share the Post Now

ರಾಯಬಾಗ*:~ ಪ್ರಚಂಡ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ ನೂತನ ಮುಖ್ಯ ಮಂತ್ರಿ ಮುತ್ಸದ್ದಿ ಹಾಗೂ ಚಿಂತನಶೀಲ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಮಾನ್ಯ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ ತರುವಾಯ ಬ್ರಹತ್ ಮಹಾನಗರ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಚೆನ್ನಾಗಿ ಅರಿತುಕೊಂಡಿರುವ ಮುಖ್ಯ ಮಂತ್ರಿಗಳು ನಿಯಮದಂತೆ ಮುಖ್ಯ ಮಂತ್ರಿಗಳ ಕಾರಿಗೆ ಇದ್ದ ಜೀರೋ ಟ್ರಾಫಿಕ್ ಬೇಡ ಎಂದು ಹೇಳುವ ಮೂಲಕ ಸಾರ್ವಜನಿಕರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಾರೆ ಎಂದು ಅರಿತು ಸರಳತನ ಮೆರೆದಿದ್ದು ಮುಖ್ಯ ಮಂತ್ರಿಗಳ ಈ ದಿಟ್ಟ ನಿರ್ಧಾರದಿಂದ ನಾಡಿನ ಸಾರ್ವಜನಿಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಗೌರವ ಸನ್ಮಾನ ರೂಪದಲ್ಲಿ ಹಾರ ತುರಾಯಿ ಶಾಲು ಶಲ್ಯ ಸ್ವೀಕರಿಸದೇ ಇರಲು ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯನವರು ದೃಢ ಸಂಕಲ್ಪ ಮಾಡಿರುವುದು ಇವರ ಸರಳತನಕ್ಕೆ ಹಿಡಿದ ರನ್ನಗನ್ನಡಿ.ಇದರ ಬದಲಾಗಿ ಪುಸ್ತಕ ಸ್ವೀಕರಿಸುತ್ತೇನೆ ಎಂದಿರುವ ಇವರ ಪುಸ್ತಕ ಪ್ರೀತಿ ಎಲ್ಲರಿಗೂ ಮೆಚ್ಚುಗೆ ಆಗಿದೆ.ಪುಸ್ತಕ ಸಂಸ್ಕೃತಿಯನ್ನು ಜನಮಾನಸದಲ್ಲಿ ಶ್ರೀಮಂತಗೊಳಿಸುತ್ತಿರುವ ಶ್ರೀ ಸಿದ್ದರಾಮಯ್ಯ ಅವರ ಪ್ರಗತಿಪರ ಚಿಂತನೆಗಳು ಸದ್ಯ ಎಲ್ಲ ಆಳುವ ಜನಪ್ರತಿನಿಧಿಗಳೆಲ್ಲರಿಗೂ ಇದೊಂದು ಒಳ್ಳೆಯ ಆದರ್ಶ ಮಾದರಿ. ಎಲ್ಲ ಹಿರಿಯ ಯುವ ಉದಯೋನ್ಮುಖ ನಾಯಕರು ಇವರ ಆದರ್ಶದ ದಾರಿಯಲ್ಲಿ ನಡೆಯುವಂತಾಗಬೇಕು. ಸರಳ, ಸಜ್ಜನಿಕೆ ಜನಪರ ಕಾಳಜಿ ಹಾಗೂ ಸಾಮಾಜಿಕ ಕಳಕಳಿ ಯನ್ನು ಅಂತರಂಗದಿ ತುಂಬಿಕೊಂಡಿರುವ, ವಿವಾದರಹಿತ ವ್ಯಕ್ತಿಯಾದ ಶ್ರೀ ಸಿದ್ದರಾಮಯ್ಯನವರು ನುಡಿದಂತೆ ನಡೆದು ತಮ್ಮ ಸಾರ್ವಜನಿಕ ಜೀವನದಲ್ಲಿ ಜಾತ್ಯತೀತ ಮಾನವೀಯ ಮೌಲ್ಯಗಳನ್ನು ನಾಡಿನೆಲ್ಲೆಡೆ ಚೆನ್ನಾಗಿ ಬಿತ್ತನೆ ಮಾಡುತ್ತಲೇ ಇರುವ ಇವರ ಸರಳ ಸಜ್ಜನಿಕೆ ನಾಡಿನ ಎಲ್ಲ ದಿಕ್ಕುಗಳ ಪ್ರಜೆಗಳು ಮುಕ್ತಕಂಠದಿಂದ ಶ್ಲಾಘಿಸುತ್ತಿರುವುದು ಗಮನಾರ್ಹ ಸಂಗತಿ.

ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!