ಜಾತ್ರೆಗಳು ಭಾವೈಕ್ಯ ಬೆಸೆಯುವ ಕೊಂಡಿಗಳಾಗಬೇಕು:ಟಿ.ಎಸ್.ವಂಟ ಗೂಡಿ

Share the Post Now

ರಾಯಬಾಗ:~* ತಾಲ್ಲೂಕಿನ ಸುಕ್ಷೇತ್ರ ಹಿಡಕಲ್ ಗ್ರಾಮದಲ್ಲಿ ಶಿವಯೋಗಿ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.ಈ ಸಂದರ್ಭದಲ್ಲಿ ಸಿದ್ದರ ಭೇಟಿ ಹಾಗೂ ಮಹಾತ್ಮರ ಪ್ರವಚನ ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭ ಜರುಗಿತು.ಮುಖ್ಯ ಅತಿಥಿಗಳಾಗಿ ಮೂಡಲಗಿ ಪಟ್ಟಣದ ಆರ್ ಡಿ ಎಸ್ ಪದವಿ ಕಾಲೇಜಿನ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿ ಶ್ರೀ ಟಿ. ಎಸ್. ವಂಟಗೂಡಿ ಮಾತನಾಡಿ “ಯಾವದೇ ದೇವರ ಜಾತ್ರೆ ಮಹೋತ್ಸವಗಳು ಕೇವಲ ಜಾತಿಗೆ ಸೀಮಿತವಾಗಿರದೆ ಪರಸ್ಪರ ಬಾಂದವ್ಯ ಬೆಸೆಯುವ ಕೊಂಡಿಗಳಾಗಿರಬೇಕು ಜಾತ್ರೆಗಳು ಸರ್ವ ಜನಾಂಗದ ಶಾಂತಿಯ ತೋಟಗಳಾಗಬೇಕು ಎಂದೂ ಸಾಹಿತಿ ಟಿ. ಎಸ್.ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು. ಜಾನಪದ ಕಲಾವಿದ ಬಿ. ಎಲ್. ಘಂಟಿ ಪ್ರಾಸ್ತಾವಿಕ ಮಾತಗಳನ್ನಾಡಿದರು.ಸಮಾರಂಭದ ದಿವ್ಯ ಸಾನಿಧ್ಯವನ್ನು ಬಬಲಾದಿ ಶಾಖಾಮಠದ ಪೂಜ್ಯರಾದ ಸದಾಶಿವ ಮುತ್ಯಾ ಹಿಡಕಲ್ ಮಾತನಾಡಿ “ಭಂಡಾರ ಭಕ್ತಿಯ ಸಂಕೇತ ಕಂಬಳಿ ಕಾಯಕ ಸಂಕೇತ “ಆದಕಾರಣ ಎಲ್ಲರೂ ಕಾಯಕ ಮಾಡುವುದರ ಮೂಲಕ ನಾಯಕರಾಗಬೇಕು ಎಂದು ಆಶೀರ್ವಚನ ನೀಡಿದರು.ದೇವಸ್ಥಾನದ ಪೂಜಾರಿಗಳಾದ ಮಾಳಸಿದ್ದ ಹಣಮಂತ ವಡೆಯರ ಕಿಚ್ಚು ಹಾಯೂವುದರ ಮೂಲಕ ದೈವ ಭಕ್ತಿ ಮೆರೆದರು.ರಾತ್ರಿ ವೇಳೆ ಸುಪ್ರಸಿದ್ದ ಡೊಳ್ಳಿನ ಕಲಾವಿದರಾದ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಕುಂಬಾರ ಹಳ್ಳದ ನಿಂಗಪ್ಪ ಬೀಳಗಿ ಹಾಗೂ ಸಂಗಡಿಗರಿಂದ ಶಿವಣಗಿಯ ಮಾಳಿಂಗರಾಯ ಡೊಳ್ಳಿನ ಗಾಯನ ಸಂಘ ಶ್ರೀ ಶಿವರಾಯ ಮಾಸ್ತರ ಹಾಗೂ ಸಂಗಡಿಗರಿಂದ ಡೊಳ್ಳಿನ ಹಾಡುಗಳು ಜರುಗಿದವು.ವೇದಿಕೆಯ ಮೇಲೆ ದೇವಸ್ಥಾನದ ಅರ್ಚಕ ಅಮ್ಮಣ್ಣ ವಡೆಯರ, ಪುರಂದರ ಮುರಗೋಜಿ, ರಾಮಣ್ಣ ಕಂಕಣವಾಡಿ, ಸದಾಶಿವ ಗಲಗಲಿ, ಜೀವನ ಬನಹಟ್ಟಿ, ಪುಂಡಲೀಕ ಜಗದಾಳ, ಮಲ್ಲಪ್ಪಾ ಸುಖಾಲಿ, ವಿಠ್ಠಲ ಸೈದಾಪೂರ, ಸಿದ್ರಾಮ ಯಬರಟ್ಟಿ, ಹಾಗೂ ಸಿದ್ದಪ್ಪ ಗುಡಿಮನಿ ಉಪಸ್ಥಿತರಿದ್ದರು ಬೀರಪ್ಪ ತಡಸಲೂರ ಸ್ವಾಗತಿಸಿದರು.ಎಮ್ ಎಚ್ ಸೈದಾಪೂರ ನಿರೂಪಿಸಿದರು ಶ್ರೀಕಾಂತ ರಾಯಮಾನೆ ವಂದಿಸಿದರು.

ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!