ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಗ್ರಾಮ ದೇವತೆಯಾದ ಹಜರತ ಮಾಸಾಹೇಬಾ ದರ್ಗಾ ಕರ್ನಾಟಕ ಮಹಾರಾಷ್ಟ್ರ ಅಪಾರ ಭಕ್ತರನ್ನು ಹೊಂದಿರುವ ಕ್ಷೇತ್ರವಾಗಿದೆ.
ಈ ದರ್ಗಾಕ್ಕೆ ಸಾಮಾನ್ಯ ಭಕ್ತರಲ್ಲದೆ ಮಾಜಿ ಪ್ರಧಾನಿ ದೇವೇಗೌಡರನ್ನು ಒಳಗೊಂಡಂತೆ ಅನೇಕ ರಾಜಕೀಯ ಮುಖಂಡರ ಆರಾಧ್ಯ ದೇವರು ಮಾಸಾಹೇಬಾ ದುರ್ಗಾ ಆಗಿದೆ ಇಲ್ಲಿ ಗುರುವಾರ ದೇವರ ವಾರ ಆಗಿದ್ದರು, ಪ್ರತಿನಿತ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದ ಬಹುತೇಕ ಜಿಲ್ಲೆಯ ಭಕ್ತರು ಮಾಸಾಹೇಬಾ ದರ್ಗಾಕ್ಕೆ ಬರುವರು ಅಂದಹಾಗೆ ಗುರುವಾರ ಬಾಗಲಕೋಟೆಯಿಂದ ಒಬ್ಬ ಭಕ್ತ ಕುಟುಂಬದವರೊಂದಿಗೆ ದರ್ಶನಕ್ಕೆ ಆಗಮಿಸಿ ದರ್ಗಾದ ಆವರಣದಲ್ಲಿ ವಜು ಮಾಡುವಾಗ ಸುಮಾರು 1ಲಕ್ಷ ಇಪ್ಪತ್ತೈದು ಸಾವಿರ ಮೌಲ್ಯದ ಚಿನ್ನಾಭರಣ ಇಟ್ಟು ಮರೆತಿದ್ದಾರೆ. ದರ್ಶನ ಪಡೆದು ಊರಿಗೆ ಮರಳಿದ್ದಾರೆ. ಆ ಚಿನ್ನಾಭರಣ ಮೈನೋದ್ದೀನ ಖಾಜಿ ಎಂಬ ದರ್ಗಾದ ಸೇವಕನ ಕೈಗೆ ಸಿಕ್ಕಿದೆ ಎರಡು ದಿನ ಕಳೆದ ನಂತರ ಚಿನ್ನಾಭರಣ ಕಳೆದುಕೊಂಡ ಭಕ್ತ ಮುರುಳಿ ದುರ್ಗಾಕ್ಕೆ ಬಂದು ಚಿನ್ನಾಭರಣ ಕಳೆದಿರುವ ಬಗ್ಗೆ ವಿಚಾರಿಸುತ್ತಾ ಬಂದಾಗ ಅದನ್ನು ತಿಳಿದ ಮೈನೋದ್ದೀನ ಖಾಜಿ ಅವರಿಗೆ ಚಿನ್ನಾಭರಣವನ್ನು ಮರುಳಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.

ಹತ್ತು ರೂಪಾಯಿ ಹಣ ಸಿಕ್ಕರೂ ಬಿಡದಂತಹ ಇಂತಹ ದಿನಮಾನದಲ್ಲಿ ಕಿಂಚಿತ್ತೂ ತಳಮಳಗೊಳ್ಳದೆ ಚಿನ್ನಾಭರಣ ಮರುಳಿಸಿದ ಮೈನೋದ್ದೀನ ಖಾಜಿ ಅವರನ್ನು ಸಾರ್ವಜನಿಕರು ಪ್ರಶಂಸಿಸಿ ಹೂಮಾಲೆ ಹಾಕಿ ಸತ್ಕರಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಹೀದ್ ಮಾರುಫ, ಯಾಸೀನ ಅಬುಫಜಲ, ಇಮ್ರಾನ ಜಾಗೀರದಾರ, ಸಾಕೀಬ ನಸರದಿ, ಮನ್ಸೂರ ಕೋತವಾಲ ಇತರರು ಉಪಸ್ಥಿತರಿದ್ದರು





