ಹಳ್ಳೂರ . ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವವು 9 ನೇ ದಿನ ಮಂಗಳವಾರ ಮದ್ಯ ರಾತ್ರಿ ವಿದ್ಯುತ್ ದೀಪಗಳನ್ನು ಆರಿಸಿ ಕತ್ತಲಿನಲ್ಲಿಯೆ ದೇವರನ್ನು ಒಯ್ಯುದನ್ನು ಯಾರು ನೋಡದ ಹಾಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಅಗಸಿ ಮಾರ್ಗವಾಗಿ 7 ಊರು ಸೀಮಿ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಬೆಟ್ಟಿ ನೀಡಿ ಪೂಜೆ ಸಲ್ಲಿಸಿ ಮರಳಿ ಬುಧವಾರ ನಸುಕಿನ ಜಾವ ನಾಲ್ಕು ಗಂಟೆಗೆ ಶ್ರಿ ದ್ಯಾಮವ್ವ ದೇವಿ ಅವರು ದ್ಯಾಮವ್ವ ದೇವಸ್ಥಾನಕ್ಕೆ ಹೂಲಿ ಕಟ್ಟಿ ಹಳಬರು, ಅರ್ಚಕರು ಸೇರಿದಂತೆ 32 ಜನ ಸೇರಿ ದೇವಸ್ಥಾನಕ್ಕೆ ಆಗಮಿಸಿದರು.3 ದಿನಗಳ ಕಾಲ ದ್ಯಾಮವ್ವ ದೇವರನ್ನು ಕತ್ತಲಲ್ಲಿ ಕುಣಿಸಿರುತ್ತಾರೆ. ಶನಿವಾರ ದಂದು ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಹಿರಿಯರು ಕೂಡಿ ಉಡಿ ತುಂಬಿ ಕೋಣ ಬಿಡುವ ಕಾರ್ಯಕ್ರಮ ನಡೆಯಲಿದೆ. ಭವ್ಯ ಜಾತ್ರೆಯ ಮುಕ್ತಾಯ ಸಮಾರಂಭ ನಡೆಯಲಿದೆ. ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯುವುದು.





