ದೇವಿ ದರ್ಶನ ಪಡೆದ ಲೋಕಸಭಾ ಸದಸ್ಯೆ ಮಂಗಳಾ ಅಂಗಡಿ!

Share the Post Now

ಹಳ್ಳೂರ . ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದೈವ ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ. ಗ್ರಾಮೀಣ ಜನರು ಜಾತಿ ಬೇಧ ಭಾವ ಮರೆತು ಎಲ್ಲರೂ ಕೂಡಿಕೊಂಡು ಜಾತ್ರೆಗಳನ್ನೂ ಹಿಂದಿನ ಪದ್ಧತಿಯಂತೆ ಅತೀ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಮಳೆ ಬೆಳೆ ಚೆನ್ನಾಗಿ ಆಗಿ ಜನರು ಸುಖ ಜೀವನ ನಡೆಸುತ್ತಿದ್ದಾರೆಂದು ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳ ಸುರೇಶ ಅಂಗಡಿ ಹೇಳಿದರು.

ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದಂದು ಹಳ್ಳೂರ ಗ್ರಾಮಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸನ್ಮಾನ ಸ್ವೀಕರಿಸಿ ಮಾತನಾಡಿ ಎಲ್ಲರೂ ಸುಖವಾಗಿರಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದರು. ಧಾರ್ಮಿಕ ವಿಚಾರಗಳಲ್ಲಿ ಎಲ್ಲವನ್ನೂ ಮರೆತು ಒಂದಾಗಿ ಆಚರಿಸುವ ಮನೋ ಭಾವನೆ ಹೊಂದಿರುವ ಪ್ರಪಂಚದ ಏಕೈಕ ರಾಷ್ಟ್ರ ಭಾರತ ಇಂತಹ ದೇಶದಲ್ಲಿ ಜನ್ಮ ಪಡೆದ ನಾವೆಲ್ಲರೂ ದನ್ಯರೆಂದು ಹೇಳಿದರು. ದೇಶದ ಸಂಸ್ಕೃತಿ ಪ್ರತೀಕವಾಗಿದೆ.

ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದವರು ಸೇರಿ ಬ್ರಹತ್ ಪ್ರಮಾನದ ಜಾತ್ರೆಯನ್ನು ಯಾವದೇ ಅಡೆ ತಡೆ ಇಲ್ಲದೆ ಮಾಡಿದ್ದು ಸಂತೋಷದ ಸಂಗತಿ ಎಂದು ಹೇಳಿದರು. ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವ ದೇವಸ್ಥಾನದಲ್ಲಿ 2 ದೈವದ ಹಿರಿಯರು ಹಾಗೂ ಕಮೀಟಿ ವತಿಯಿಂದ ಲೋಕಸಭಾ ಸದಸ್ಯರಾದ ಮಂಗಳ ಸುರೇಶ ಅಂಗಡಿ ಅವರಿಗೆ ಸನ್ಮಾನ ನೆರವೇರಿಸಿದರು. ಈ ಸಮಯದಲ್ಲಿ ಮಲ್ಲಪ್ಪ ನೆಮಾಗೌಡರ.ಡಾ ಬಿ ಎಂ ಪಾಲಬಾಂವಿ. ಮಾಜಿ ತಾ ಪ ಸದಸ್ಯೆ ಸವಿತಾ ಡಬ್ಬಣ್ಣವರ.ಕಮೀಟಿ ಅಧ್ಯಕ್ಷ ಅಡಿವೆಪ್ಪ ಪಾಲಬಾಂವಿ. ಹಣಮಂತ ತೇರದಾಳ. ಗಿರೀಶ ಗೋಡಿಗೌಡರ. ಭೀಮಪ್ಪ ಹೊಸಟ್ಟಿ. ಭೀಮಪ್ಪ ಸಪ್ತಸಾಗರ. ಗುರುನಾಥ ಬೊಳನ್ನವರ. ಶಂಕರ ಅಂಗಡಿ.

ದುಂಡಪ್ಪ ಬಡಿಗೇರ. ಯಮನಪ್ಪ ನಿಡೋಣಿ. ಹಣಮಂತ ಪಾಲಬಾಂವಿ. ಶಿವದುಂಡು ಕೊಂಗಾಲಿ. ಶ್ರೀಕಾಂತ ಕೌಜಲಗಿ. ಮುರಿಗೆಪ್ಪ ಮಾಲಗಾರ. ಮಲ್ಲಪ್ಪ ಕುಲಿಗೊಡ. ಈರಣ್ಣ ಡವಳೆಶ್ವರ. ಸತ್ಯನಾರಾಯಣ ತಮದಡ್ಡಿ. ಕೆಂಪಣ್ಣ ಅಂಗಡಿ. ಈರಪ್ಪ ಕಮಲದಿನ್ನಿ. ರಾಕೇಶ ಪೂಜೇರಿ. ಸಿದ್ದಣ್ಣ ದುರದುಂಡಿ.ಸದಾಶಿವ ಮುಡಲಗಿ. ಭೀಮಪ್ಪ ಕೊಂಗಾಲಿ. ಲಕ್ಷ್ಮಣ ಲೋಕಣ್ಣವರ. ಗಂಗಪ್ಪ ಕುರನಿಂಗ ಸೇರಿದಂತೆ 2 ದೈವ ಹಾಗೂ 3 ಊರು ಗ್ರಾಮದ ಹಿರಿಯರು ಕಮೀಟಯವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!