ವರದಿ ಮುರಿಗೆಪ್ಪ ಮಾಲಗಾರ.
ಹಳ್ಳೂರ . ದ್ಯಾಮವ್ವ ಹಾಗೂ ಶ್ರಿ ಮಹಾಲಕ್ಷ್ಮೀ ದೇವರ ಜಾತ್ರೆಯು ಮೇ 22 ರಂದು ದ್ಯಾಮವ್ವ ದೇವಿ ಹಳ್ಳೂರ ಗ್ರಾಮಕ್ಕೆ ಪ್ರವೇಶವಾಗಿ ಬಂಡಾರ ದೊಂದಿಗೆ ಪ್ರಾರಂಬವಾಗಿ ನಿರಂತರ 13 ದಿನಗಳ ಕಾಲ ಅತೀ ವಿಜೃಂಭಣೆಯಿಂದ ನಡೆದು 4 ರಿಂದ 5 ಲಕ್ಷ ಬಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಶನಿವಾರ ದಂದು ಶ್ರೀ ದ್ಯಾಮವ್ವ ದೇವರ ಕೋಣ ಬಿಡುವ ಕಾರ್ಯಕ್ರಮವನ್ನು ಮಲ್ಲಪ್ಪ ಹೊಸಟ್ಟಿ ಅವರ ಮನೆಯಿಂದ ಆರತಿ ಮಾಡಿ ವಿವಿಧ ವಾದ್ಯ ಮೇಳ ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಯೊಂದಿಗೆ ಸಂಚರಿಸಿ ಶ್ರೀ ದ್ಯಾಮವ್ವದೇವಿ ದೇವಸ್ಥಾನಕ್ಕೆ ಬಂದು ದೇವರಿಗೆ ಉಡಿ ತುಂಬಿ ಕೋಣವನ್ನು ಬಿಡಲಾಯಿತು. ನಂತರ ದ್ಯಾಮವ್ವ ದೇವಸ್ಥಾನದಲ್ಲಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಭಕ್ತರು ಹಾಗೂ ವತನದಾರರು, ಹಿರಿಯರು ಅರ್ಚಕರು ಪೋತರಾಜ ಎಲ್ಲರೂ ಸೇರಿದ ಸಮಯದಲ್ಲಿ ಮುಂಬರುವ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರೆಯನ್ನು 9 ವರ್ಷಕ್ಕೆ ಮಾಡುತ್ತೇವೆ ಎಂದು ಬಂಡಾರ ಹಿಡಿದರು.
ನಂತರ ದ್ಯಾಮವ್ವ ದೇವಸ್ಥಾನದಿಂದ ಶ್ರೀ ಮಹಾಲಕ್ಷ್ಮೀ ದೇವಸ್ಥಾದವರೆಗೆ ಮೆರವಣಿಗೆ ಮೂಲಕ ಕೋಣವನ್ನು ಕರೆ ತರಲಾಯಿತು.ನಂತರ 3 ಊರು ಹಿರಿಯರೂ ಶ್ರೀ ಮಹಾಲಕ್ಷ್ಮೀ ದೇವಿಯ ಉಡಿ ತುಂಬಿ ಜೈಕಾರ ಹಾಕುತ್ತಾ ಬಂಡಾರ ಹಾರಿಸಿ ಭಕ್ತಿ ಭಾವದಿಂದ ಸಂಬ್ರಮಪಟ್ಟರು ಬಕ್ತರು ಬಂಡಾರದಲ್ಲಿ ಮಿಂದೆದ್ದು ಕಂಡುಬಂದಿತು ಸುಮಾರು 2- 3 ಟನ್ ಬಂಡಾರ ಹಾರಿಸಿದಾಗ ಗ್ರಾಮವು ಬಂಡಾರಮಯವಾಗಿತ್ತು. ಶನಿವಾರ ದಂದು ಸುಮಾರು 1 ಲಕ್ಷ ಬಕ್ತರು ದೇವರ ದರ್ಶನ ಪಡೆದು ಉಡಿ ತುಂಬಿದರು. ಅನ್ನ ಪ್ರಸಾದದೊಂದಿಗೆ ಅದ್ದೂರಿ ಬಂಡಾರ ಜಾತ್ರೆ ಶನಿವಾರದಂದು ಸಂಪನ್ನಗೊಂಡಿತು.
13 ದಿನಗಳ ಕಾಲ ಗ್ರಾಮದಲ್ಲಿ ದಿನಾಲೂ ನಾಟಕ ರಸ ಮಂಜರಿ ಮಹಾತ್ಮರ ಆಶೀರ್ವಚನ, ವಿವಿಧ ಶರತ್ ಗಳು ಇವೆಲ್ಲಾ ಜನರ ಕಣ್ಮನ ಸೆಳೆದ ಮನ ತಣಿಸಿದವು. ಊರಲ್ಲಿ ಪ್ರತಿ ದಿನ ಜಾತ್ರೆಯ ಸಂಬ್ರಮ ಜೋರಾಗಿಯೇ ಕಂಡು ಬಂದಿತ್ತು. ಈ ಸಮಯದಲ್ಲಿ ಹಳ್ಳೂರ,ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರು, ಹಾಗೂ ಸರ್ವ ಬಕ್ತರು ಉಪಸ್ಥಿತರಿದ್ದರು.





