ವಸತಿ ಶಾಲೆಗಳಿಗೆ ಆಯ್ಕೆ:~ಜ್ಞಾನ ಸಾಗರ ಶಾಲೆಯ ಅಪೂರ್ವ ಸಾಧನೆ

Share the Post Now

ರಾಯಬಾಗ:~* ತಾಲ್ಲೂಕಿನ ಹಾರೂಗೇರಿ ಪಟ್ಟಣ ಸಮೀಪದ ಹಾರೂಗೇರಿ ಕ್ರಾಸ್ ದಲ್ಲಿನ ಶ್ರೀ ಅರಣ್ಯ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಜ್ಞಾನ ಸಾಗರ ನವೋದಯ ಹಾಗೂ ಸೈನಿಕ ತರಬೇತಿ ಶಾಲೆಯ ವಿದ್ಯಾರ್ಥಿಗಳು ಬೇರೆ ಬೇರೆ ವಸತಿ ಶಾಲೆಗಳಿಗೆ ಆಯ್ಕೆಗೊಳ್ಳುವ ಮೂಲಕ ಈ ಭಾಗದ ಎಲ್ಲ ಶಿಕ್ಷಣ ಪ್ರೇಮಿಗಳಲ್ಲಿ ಗಮನ ಸೆಳೆದಿದೆ.ಈ ಸಂಸ್ಥೆ ಹುಟ್ಟಿ ಕೇವಲ 6 ವರುಷಗಳು ಗತಿಸಿವೆ.

ಈಗಾಗಲೇ ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅನೇಕ ಬಡ ಪ್ರತಿಭಾವಂತ ನೂರಾರು ವಿದ್ಯಾರ್ಥಿಗಳು ರಾಜ್ಯದ ಬೇರೆ ಬೇರೆ ವಸತಿ ಶಾಲೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.ಪ್ರಸಕ್ತ ಸಾಲಿನ ಈ ಶೈಕ್ಷಣಿಕ ವರ್ಷದಲ್ಲಿ ಆದರ್ಶ ವಸತಿ ಶಾಲೆಗೆ 4 ವಿದ್ಯಾರ್ಥಿನಿಯರು ಹಾಗೂ ಮರಾರ್ಜಿ ವಸತಿ ಶಾಲೆಗಳಿಗೆ ಒಟ್ಟು 6 ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ದಡ್ಡ(ಜಾಣ ರಲ್ಲದ) ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಎಂದು ಕೇವಲ ಬಾಯಿ ಮಾತಿನಲ್ಲಿ ಭರವಸೆ ನೀಡದೆ ಸಿ.ಹಾಗೂ ಡಿ.ದರ್ಜೆಯ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಈ ಶಾಲೆಯ ಸಕಲ ಗುರು ಬಳಗ ಅತ್ಯಂತ ಪ್ರಾಮಾಣಿಕತೆಯಿಂದ ತನು ಮನ ಭಾವ ಸಮರ್ಪಿಸಿ ಮಕ್ಕಳಿಗೆ ನೈತಿಕ ಶಿಕ್ಷಣ ಉತ್ತಮ ಸಂಸ್ಕಾರ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಿ ಉತ್ತೀರ್ಣರಾಗಬೇಕೆಂದು ಚೆನ್ನಾಗಿ ಮನಮುಟ್ಟುವಂತೆ ಹೇಳಿಕೊಟ್ಟು ಅವರಲ್ಲಿ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ತುಂಬಿ ಬಡ ಮಕ್ಕಳೂ ಸಹ ಬೇರೆ ಬೇರೆ ವಸತಿ ಶಾಲೆಗಳಿಗೆ ಆಯ್ಕೆ ಆಗಿ ಆಂಗ್ಲ ಮಾಧ್ಯಮದಲ್ಲಿ ಓದಿ ಭವಿಷ್ಯದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ವಿಶಿಷ್ಟ ಕೌಶಲ್ಯಗಳನ್ನು ವಿಭಿನ್ನ ತಂತ್ರಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿರುವ ಈ ಶಾಲೆ ಈ ಭಾಗದಲ್ಲಿ ಎಲೆ ಮರೆಯ ಕಾಯಿಯಂತೆ ಸದ್ದಿಲ್ಲದೇ ಮಕ್ಕಳ ಬದುಕನ್ನು ಕಟ್ಟುತ್ತ, ಈ ಜ್ಞಾನ ಸಾಗರ ಶಾಲೆ ಪಾಲಕರ ಪ್ರಜ್ಞಾವಂತ ನಾಗರೀಕರ ಮನದಾಳದಲ್ಲಿ ಭರವಸೆಯ ಬೆಳಕಾಗಿರುವುದಂತೂ ಸತ್ಯ.ಪರಿಶ್ರಮ, ನಿಷ್ಠೆ, ಪ್ರಾಮಾಣಿಕ ಪ್ರಯತ್ನ ಸಮರ್ಪಣಾ ಭಾವದಿಂದ ವಿದ್ಯಾರ್ಥಿಗಳ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿರುವ ಸಂಚಾಲಕರಾದ. ಶ್ರೀ ವಿ.ಎಂ.ಪಾಟೀಲ ಹಾಗೂ ಕಾರ್ಯದರ್ಶಿ ಶ್ರೀ ಶಾಂತಿನಾಥ ಪಾಟೀಲ ಈ ಸಂಸ್ಥೆ ಎಂಬ ರಥದ ಎರಡು ಗಾಲಿಗಳಾಗಿದ್ದಾರೆ.

ಶ್ರೀಮತಿ ಮಂಜುಳಾ ದೊಡಮನಿ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ ಈ ಉಭಯ ಗುರುಮಾತೆಯರು ಈ ಶಾಲೆಯ ಉನ್ನತಿಗೆ ಪಾಟೀಲ ಸಹೋದರರ ಹೆಗಲಿಗೆ ಹೆಗಲು ಕೊಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿದೀಪವಾಗಿದ್ದಾರೆ. ಪ್ರತಿ ವರುಷ ಹಲವು ವಿದ್ಯಾರ್ಥಿಗಳು ಆಯ್ಕೆಯಾಗಿ ಸಾಧನೆಯ ಶಿಖರದಲ್ಲಿ ಕಂಗೊಳಿತ್ತಿರುವುದು ಗಮನಾರ್ಹ. ಪ್ರಯತ್ನದ ಪಥದಲ್ಲಿ ಸಾಗುತ್ತಿರುವ ನಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ಭಂಡಾರದ ಒಡೆಯ, ಜಾಗ್ರತ ದೈವ, ಶ್ರೀ ಅರಣ್ಯ ಸಿದ್ದೇಶ್ವರ ದೇವರ ದಿವ್ಯ ಅನುಗ್ರಹವೇ ಕಾರಣ ಎಂದು ಸಂಚಾಲಕರಾದ ಶ್ರೀ ವಿಶ್ವನಾಥ ಪಾಟೀಲ ಅವರು ಅಭಿಮಾನದಿಂದ ಸ್ಮರಿಸುತ್ತಾರೆ.

ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!