ಹಳ್ಳೂರ . ಗ್ರಾಮದಲ್ಲಿ ಸಂಭ್ರಮದಿಂದ ಕಾರ ಹುಣ್ಣಿಮೆಯನ್ನು ಆಚರಣೆ ಮಾಡಿದರು. ಮುಂಗಾರು ಹೋರಿ ಮುಂದೆ ಬಂದಿದ್ದು ಅದಕ್ಕೆ ಮೊದಲನೇ ಮಳೆ ಬೆಳೆ ಸಮೃದ್ಧಿ ಆಗುತ್ತದೆ ಎಂದು ವಾಡಿಕೆ ಇದೆ. ಜೋಡು ಹೋರಿಗಳ ಕೊರಳಲ್ಲಿ ಬೇವಿನ ತಪ್ಪಲ ಕಟ್ಟಿ ಕರಿ ಹರಿದರು. ಪ್ರಾರಂಭದಲ್ಲಿ 2 ಎತ್ತುಗಳಿಗೆ ಮೈತುಂಬ ಬಣ್ಣ ಹಚ್ಚಿ ಹೋರಿ ಕೊಂಬುಗಳಿಗೆ ಬಣ್ಣ ಬಳಿದು ಜೊತೆಗೆ ಮೈಮೇಲೆ ವಿಶೇಷವಾದ ಚಿತ್ತಾರ ಬರವಣಿಗೆ ಮಾಡಿ ಶೃಂಗಾರ ಮಾಡುತ್ತಾರೆ. ಕಾರ ಹುಣ್ಣಿಮೆ ದಿನದಂದೂ ಎತ್ತು ಹೋರಿಗಳಿಗೆ ಕೃಷಿ ಚಟುವಟಿಕೆಗಳಿಗೆ ವಿರಾಮ ನೀಡಲಾಗುತ್ತಿದೆ. ಶೃಂಗಾರ ಮಾಡಿದ ಎತ್ತುಗಳಿಗೆ ಹೋಳಿಗೆ ಕಡಬು ಖಾದ್ಯಗಳನ್ನೂ ಮಾಡಿ ಉಣಬಡಿಸುವ ಮೂಲಕ ಅನ್ನದಾತರು ತಮ್ಮ ಎತ್ತುಗಳ ಮೇಲಿನ ಅಭಿಮಾನ ಮೆರೆಯುತ್ತಾರೆ. ಈ ಸಮಯದಲ್ಲಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.





