ರಾಯಬಾಗ: ಶ್ರೀ ಚೆನ್ನ ವೃಷಭೇಂದ್ರ ಶಿಕ್ಷಣ ಸಂಸ್ಥೆ ಹಾಗೂ ಬಿ ಆರ್ ದರೂರ ಸೋಶಿಯಲ್ ಫೌಂಡೇಶನ್ ಸಹಕಾರದೊಂದಿಗೆ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಚನ್ನವೃಷಬೇಂದ್ರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜೂನ್ 5 ರಂದು ಸೋಮವಾರ ಬೆಳಿಗ್ಗೆ ಸಸಿಗಳಿಗೆ ಮತ್ತು ಗಿಡ ಮರಗಳಿಗೆ ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೇ ನಮ್ಮ ಉಸಿರು ಕಾರಣ ನಾವೆಲ್ಲ ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ನಾವೆಲ್ಲರೂ ನೂರು ವರುಷ ಆರೋಗ್ಯವಾಗಿ ಮತ್ತು ಸಂತೋಷವಾಗಿ ಬಾಳಿ ಬದುಕಬೇಕಾದರೆ ಪರಿಸರ ಸಂರಕ್ಷಣೆ ಅನಿವಾರ್ಯ,
ನಮ್ಮ ನಾಡಿನ ನಾಳಿನ ಪ್ರಜೆಗಳಾದ ನೀವು ಆ ಜವಾಬ್ದಾರಿಗಳನ್ನು ಹೊರಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಗುರುಗಳಾದ ಶ್ರೀ ಎಸ್ ಎಲ್ ಜಾಧವ ಎಲ್ಲ ಮಕ್ಕಳಿಗೆ ಕಿವಿ ಮಾತು ಹೇಳಿದರು, ಶಾಲೆಯ ಸಂಗೀತ ಶಿಕ್ಷಕರಾದ ಎಂ ಎಸ್ ಬೆಂಡವಾಡ ಪರಿಸರ ಗೀತೆಯನ್ನು ಬಹಳ ಸುಶ್ರಾವ್ಯವಾಗಿ ಹಾಡಿದರು, ಶಿಕ್ಷಕ ಶ್ರೀ ಎಂ ಸಿ ಮಾಡಲಗಿ ಸ್ವಾಗತಿಸಿದರು, ಕೆ ಜಿ ಲುಡಬುಡೆ ನಿರೂಪಿಸಿದರು, ಸ್ಕೌಟ್ ಮಾಸ್ಟರ್ ಆರ್ ಎಂ ಕಬ್ಬೂರ ವಂದಿಸಿದರು, ಸರ್ವ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





