ರಾಯಬಾಗ*:~ ಪ್ಲಾಸ್ಟಿಕ ಬಳಕೆ ಸಂಪೂರ್ಣ ನಿಷೇಧಿಸುವ ಶಪಥ ಮಾಡಿದಾಗ ಪರಿಸರ ರಕ್ಷಣೆಯು ಸಾರ್ಥಕತೆ ಪಡೆಯುತ್ತದೆಯೆಂದು ನಿವೃತ್ತ ಅಪರ ಅಯುಕ್ತ ವೆಂಕಟೇಶ ಮಾಚಕನೂರ ಹೇಳಿದರು.
ಅವರು ನೆರೆಯ ಅಥಣಿ ತಾಲ್ಲೂಕು ಕಡೆಯ ಗ್ರಾಮ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ *ಪರಿಸರೋತ್ಸವ* ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡುತ್ತಾ “ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆಯೆಂದು ಹೇಳಿದರು”.ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರುಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ ಮೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸಿದರು.ಅಲಗೊಂಡ ಕತ್ತಿˌರಮೇಶ ಬಡಿಗೇರˌಗುಂಡು ರಡ್ರಟ್ಟಿˌ ಲಕ್ಷ್ಮಣ ಗುಂಜಿಗಾಂವಿˌಬಸಪ್ಪ ತೇಲಿ ಉಪಸ್ಥಿತರಿದ್ದರು.
ಗಿರೀಶ ತೇಲಿˌಸಾಕ್ಷಿ ಜಾಯಗೋಣಿˌಸಜನಾ ಮುಲ್ಲಾˌ ಕಾವೇರಿ ಸನದಿˌರೋಹಿತ ರಡ್ರಟ್ಟಿˌರಾಹುಲ ನಾಯಿಕ ನಗದು ಬಹುಮಾನಕ್ಕೆ ಭಾಜನರಾದರು.ಸಾವನಕುಮಾರ ಗಸ್ತಿ ನಿರೂಪಿಸಿ ವಂದಿಸಿದರು.ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಸ್ವಾಗತಿಸಿ ಪೀಠಿಕಾ ನುಡಿಗಳನ್ನಾಡಿದರು.ಶಿಕ್ಷಕರುˌವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





