ಮುಗಳಖೋಡ: ಸಮೀಪದ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಶಾಲೆ ಸಮೀರವಾಡಿ ಹಾಗೂ ವಿನಯ ಮಂದಿರ ಪ್ರೌಢಶಾಲಾ ಆವರಣದಲ್ಲಿ ಜೂ.05 ಸೋಮವಾರದಂದು ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಸಮೀರವಾಡಿಯ ಗೋದಾವರಿ ಬಯೋರಿಪೈನರಿಜ್ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೆಶಕರಾದ ಬಿ.ಅರ್.ಬಕ್ಷಿ ಇವರು ಶಾಲಾವರಣದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಕಾರ್ಖಾನೆಯ ಎಲ್ಲಾ ಅಧಿಕಾರಿಗಳು ಹಾಗೂ ಮಜದೂರ ಯುನಿಯನ್ ಅಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಅವಳಿ ಶಾಲೆಯ ಮುಖ್ಯ ಗುರುಗಳು ವಿದ್ಯಾರ್ಥಿಗಳೊಂದಿಗೆ ಸಸಿಗಳನ್ನು ನೆಡುವು ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಮಕ್ಕಳಿಗೆ ಪರಸರದ ಕಾಳಜಿ ಬಗ್ಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ವ್ಹಿ.ಪಿ ಕಣವಿ, ಮಜದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜೆರಿ, ಮುಖ್ಯ ಗುರುಗಳಾದ ಎಸ್.ಎಸ್. ನಡುವಿನಮನಿ, ವ್ಹಿ.ಎಚ್.ಭಜಂತ್ರಿ , ಸಿ.ಅನಿಲಕುಮಾರ, ಜಿ ಕೃಷ್ಣೆಗೌಡರ ಮತ್ತು ಶಾಲೆಯ ಹಾಗೂ ಕಾರ್ಖಾನೆಯ ಎಲ್ಲ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಸಂತೋಷ ಮುಗಳಿ





