ಮುಗಳಖೋಡದಲ್ಲಿ ವಿಶ್ವ ಪರಿಸರ ದಿನಾಚರಣೆ

Share the Post Now

ಮುಗಳಖೋಡ: ಪಟ್ಟಣದ ಪುರಸಭೆ ಹಾಗೂ ಸರಕಾರಿ ಪ್ರಾಥಮಿಕ (ಕೇಂದ್ರ) ಶಾಲೆಯ ಸಹಯೋಗದೊಂದಿಗೆ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.


ಪ್ರಾಥಮಿಕ ಶಾಲಾ ಆವರಣದಲ್ಲಿ ಹಾಗೂ ಪುರಸಭೆ ಕಾರ್ಯಾಲಯದ ಹತ್ತಿರ ಪ್ರಥಮ ದರ್ಜೆ ಸಹಾಯಕ ರಾಜು ರೊಡಕರ ವಿದ್ಯಾರ್ಥಿಗಳೊಂದಿಗೆ ಸಸಿಗಳನ್ನು ನಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಪರಿಸರ ರಕ್ಷಣೆ ಮಾಡೋಣ ಎಂದು ಕರೆ ನೀಡಿದರು.



ನಂತರ ಪತ್ರಕರ್ತ ಸದಾಶಿವ ಬಡಿಗೇರ ಮಾತನಾಡಿ ಪರಿಸರದ ಕಾಳಜಿ ಮಾಡಬೇಕು, ಪರಿಸರವನ್ನು ರಕ್ಷಿಸಿದರೆ ಸುಖ ಸಮೃದ್ದಿ ಸಿಗುತ್ತದೆ. ಪರಿಸರ ನಮ್ಮ ಉತ್ತಮ ಆರೋಗ್ಯವನ್ನು ಹೊಂದಲು ಸಹಾಯಕಾರಿಯಾಗಿದೆ ಎಂದು ಪರಿಸರದ ಕಾಳಜಿ ಬಗ್ಗೆ ತಿಳಿ ಹೇಳಿದರು.
ಬಳಿಕ ಶಿವಪುತ್ರ ಮೂಡಲಗಿ ವಿಶ್ವ ಪರಿಸರ ದಿನದ ಕುರಿತು ಮಾತನಾಡಿದರು.



ನಂತರ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಾಹಾರಾಜರ ಶ್ರೀ ಮಠದ ಹತ್ತಿರ ಸಸಿಗಳನ್ನು ನೆಟ್ಟು ನೀರುಣಿಸಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಎಫ್ ಡಿ ಎ ಶಿವಪುತ್ರ ಮೂಡಲಗಿ , ಲಕ್ಕಪ್ಪ ಪೂಜೇರಿ, ಯೋಗೆಂದ್ರ ಕಾಡೆ, ಪತ್ರಕರ್ತ
ಸದಾಶಿವ ಬಡಿಗೇರ ಹಾಗೂ ಶಾಲೆಯ ಮುಖ್ಯ ಗುರುಗಳು, ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಮತ್ತು ಪುರಸಭೆಯ ಎಲ್ಲ ಪೌರ ಕಾರ್ಮಿಕರು ಹಾಜರಿದ್ದರು.

ವರದಿ: ಸಂತೋಷ ಮುಗಳಿ

Leave a Comment

Your email address will not be published. Required fields are marked *

error: Content is protected !!