ಹಳ್ಳೂರ . ಭಕ್ತಿ ಭಾವದಿಂದ ಪಾಲ್ಗೊಂಡ ಯಾವುದೇ ತಂಟೆ ತಕರಾರು ಅಡಚಣೆ ಇಲ್ಲದೆ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಹಿರಿಯರು ಕೂಡಿಕೊಂಡು ಜಾತಿ ರಾಜಕಾರಣಿ ಬೇದ ಭಾವ ಮರೆತು ಎಲ್ಲರೂ
ಒಂದಾಗಿ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರೆಯನ್ನು ಬೆಳಗಾವಿ ಜಿಲ್ಲೆಯಲ್ಲಿಯೆ ಬ್ರಹತ್ ಹಾಗೂ ವಿಶೇಷ ಜಾತ್ರೆ ಆಗಿದ್ದು ಸಂತೋಷದ ಸಂಗತಿ ಎಂದು ಸುನದೊಳಿ ಜಡಿ ಸಿದ್ದೇಶ್ವರ ಶಿವಾನಂದ ಸ್ವಾಮೀಜಿ ಅವರು ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವರ ದೇವಸ್ಥಾನದಲ್ಲಿ ನಡೆದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಭಿನಂದನಾ ಸಮಾರಂಭ ದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಭಕ್ತಿ ಭಾವ ಪ್ರೀತಿ ವಿಶ್ವಾಸದಿಂದ ವೈಭವ ಜಾತ್ರೆ ಗ್ರಾಮದಲ್ಲಿ ಬಂಡಾರ ಹಾರಿಸಿ ಬಂಡಾರ ದಲ್ಲಿ ಬಕ್ತಿ ಮೆರೆದಿದ್ದಾರೆ.
ಅನ್ಯಾಯ ಅದರ್ಮ ದಾರಿ ಬಿಟ್ಟು ದೇವರನ್ನು ನಂಬಿ ನಡೆಯಿರಿ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮೀ ದೇವರು ನಿಮಗೆಲ್ಲ ಸಿರಿ ಸಂಪತ್ತು ನೀಡಲೆಂದು ಶುಭ ಕೋರಿದರು. ಸಾಹಿತಿಗಳು ಹಾಗೂ ಪತ್ರಕರ್ತ ಬಿ ಪಿ ಬಂದಿ ಮಾತನಾಡಿ ಹಳ್ಳೂರ ಜಾತ್ರೆ ಸಂಬ್ರಮ ಸಡಗರ ವೈಭವ ನೋಡಲು ಬಂದ ಜನ ಸಾಗರವೇ ಸಾಕ್ಷೀ.
ಶಿರಸಿ ಮಾರಿಕಾಂಬಾ ದೇವಿಯ ವೈಭವ ಜಾತ್ರೆ ಅದಕ್ಕೆ ಸರಿ ಸಮನಾದದ್ದು ಹಳ್ಳೂರ ಜಾತ್ರೆ 15 ಟನ್ ಕ್ಕಿಂಥ ಅಧಿಕ ಬಂಡಾರ ಹಾರಿಸಿ ಗ್ರಾಮವನ್ನೆ ಬಂಡಾರಮಯವಾಗ





