ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿಯ ಪ್ರತಿಷ್ಠಿತ ಶ್ರೀ ಚೆನ್ನವೃಷಭೇಂದ್ರ ಶಿಕ್ಷಣ ಸಂಸ್ಥೆಯ, ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ; ಅಂಜಲಿ ಸುರೇಶ ನಿಂಗನೂರೆ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ 620 ಅಂಕಗಳನ್ನು ಪಡೆದು ರಾಜ್ಯಕ್ಕೆ 6 ನೇ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಿರೀಶ ದರೂರ ಅವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಶುಭ ಕೋರಿದರು,
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಖ್ಯ ಗುರುಗಳಾದ ಶ್ರೀ ಎಸ್ ಎಲ್ ಜಾಧವ ರವರು ಮಾತನಾಡಿ ನಮ್ಮ ಸಂಸ್ಥೆಯ ಮೇಲಿನ ನಿನ್ನ ಪ್ರೀತಿ ಯಾವಾಗಲೂ ಹೀಗೆ ಇರಲಿ ಮತ್ತು ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು, ಸಹಶಿಕ್ಷಕರುಗಳಾದ ಎಸ್ ಎಂ ನಿಂಬಾಳಕರ, ಎ ಐ ಬಡಿಗೇರ, ಆರ್ ಕೆ ಗಸ್ತಿ, ಶ್ರೀಮತಿ ಆರ್ ಡಿ ಕೊಳವಿ, ಆರ್ ಎಂ ಕಬ್ಬೂರ, ಕುಮಾರ ಕಾಂಬಳೆ ಹಾಗೂ ಸರ್ವ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





