ಮನುಕುಲದ ಉಳಿವಿಗೆ ಪರಿಸರ ಉಳಿಸಿ: ಶಿವಾನಂದ ಪಾಟೀಲ ಅಭಿಮತ

Share the Post Now

ಬೆಳಗಾವಿ.ರಾಯಬಾಗ*:~ ಹಸಿರೇ ಭೂಮಿಯ ಉಸಿರು, ಉಸಿರೇ ಪ್ರತಿ ಮನುಜನ ಜೀವಾಳವಾಗಿದ್ದು ಮನುಕುಲದ ಉಳಿವಿಗೆ ಪರಿಸರ ಉಳಿಸುವ ಸಂಕಲ್ಪ ಮಾಡೋಣ ಎಂದು ಕೆ.ಎಲ್.ಇ. ಸಂಸ್ಥೆಯ ಪದವಿಪೂರ್ವ ಹಾಗೂ ಪದವಿ ಕಾಲೇಜು ಶಿರಗುಪ್ಪಿಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಶಿವಾನಂದ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಅವರು ಶನಿವಾರ ದಿನಾಂಕ 10 ರಂದು ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಪದವಿಪೂರ್ವ ಹಾಗೂ ಪದವಿ ಕಾಲೇಜು ಶಿರಗುಪ್ಪಿಯಲ್ಲಿ ಎನ್. ಎಸ್.ಎಸ್.ಸಹಯೋಗದಲ್ಲಿ “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ಹಮ್ಮಿಕೊಂಡಿದ್ದ “ಪಿಟ್ ಇಂಡಿಯಾ ಸೈಕಲ್ ಜಾಥಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪರಿಸರವನ್ನು ನಾವು ಕಾಳಜಿಯಿಂದ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಗಿಡಮರಗಳನ್ನು ಒಂದು ಮಗುವಿನಂತೆ ಜೋಪಾನ ಮಾಡುವಂತೆ ತಮ್ಮ ಪಾಲಕರಿಗೆ ಸ್ವಯಂ ಪ್ರೇರಿತರಾಗಿ ಜಾಗೃತಿ ಮೂಡಿಸಬೇಕು ಎಂದು ಮಾರ್ಮಿಕವಾಗಿ ಸಲಹೆ ನೀಡಿದರು.
ಇದಕ್ಕೂ ಮೊದಲು ಆಗಮಿಸಿದ್ದ ಗಣ್ಯ ಮಾನ್ಯರು ಸಸಿಗೆ ನೀರೆರೆಯುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಾನಿಕ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಆಯ್.ಎ.ಪಾಟೀಲ ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕ

ಪ್ರೊ.ಎಲ್.ಎಸ್.ವಂಟಮೂರೆ,ಪ್ರೊ.ರಾಧಿಕಾ ಯಾದವ,ಎನ್. ಎಸ್.ಎಸ್.ಸಂಯೋಜನ ಅಧಿಕಾರಿಗಳಾದ ಪ್ರೊ.ಬಿ.ಆರ್.ನರವಾಡೆ ಪ್ರೊ.ಎ.ಎಸ್. ಶಿರಗುಪ್ಪೆ ದೈಹಿಕ ಶಿಕ್ಷಕರಾದ ಶ್ರೀ ಎಂ.ಎಸ್.ಕೌಲಗುಡ್ಡ,ಹಾಗೂ ಶ್ರೀ ರಾಹುಲ್ ಮಾಂಜರೆಕರ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು ತಮ್ಮ ಅಧ್ಯಕ್ಷೀಯ ಆಶಯ ನುಡಿಗಳಲ್ಲಿ “ನಮ್ಮ ನಮ್ಮ ಮನೆ, ಶಾಲೆ, ಕಾಲೇಜಿನ ಸುತ್ತ ಮುತ್ತ ಗಿಡಮರಗಳನ್ನು ನೆಟ್ಟು ಚೆನ್ನಾಗಿ ಪೋಷಣೆ ಮಾಡಬೇಕು. ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಂದು ಹಮ್ಮಿಕೊಂಡ ಈ ಸೈಕಲ್ ಜಾಥಾದ ಮೂಲಕ ಶಿರಗುಪ್ಪಿ ಹಾಗೂ ಜುಗೂಳ ಗ್ರಾಮಗಳ ಪ್ರತಿ ಓಣಿ ಓಣಿಗಳಲ್ಲಿ ಪರಿಸರ ರಕ್ಷಣೆಯ ಕುರಿತು ವ್ಯಾಪಕವಾಗಿ ಜನಜಾಗೃತಿ ಮೂಡಿಸಬೇಕು. ಇಂದು ನಾವೆಲ್ಲರೂ ಹಸಿರಿನ ವಾತಾವರಣ ನಿರ್ಮಿಸುವ ದೀಕ್ಷೆ ತೊಡೋಣ ಎಂದು ನುಡಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ. ಸ್ವಾಗತಿಸಿ ನಿರೂಪಿಸಿದರು.


ನಂತರ ಆಗಮಿಸಿದ್ದ ಗಣ್ಯರು ಹಸಿರು ನಿಶಾನೆ ದರ್ಶಿಸುವ ಮೂಲಕ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಶಿರಗುಪ್ಪಿ ಹಾಗೂ ಜುಗೂಳ ಗ್ರಾಮಗಳ ಪ್ರತಿ ಓಣಿ ಓಣಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಬಗೆ ಬಗೆಯ ಘೊಷಣೆಗಳನ್ನು ಕೂಗುತ್ತ ಜನಜಾಗೃತಿ ಮೂಡಿಸಿದರು.ಮಾರ್ಗ ಮದ್ಯೆ ಹಲವು ಗಣ್ಯ ನಾಗರೀಕರಿಗೆ ಜಾಥಾದ ನೇತೃತ್ವ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರು ಹಾಗೂ ಸಕಲ ಅಧ್ಯಾಪಕರು ಸಸಿಗಳನ್ನು ನೀಡುತ್ತ ನಿರ್ಗಮಿಸಿದರು. ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಾಂಜ್ ಪಥಕ ಪಿರಾಮಿಡ್ ರಚಿಸಿ ಸಾರ್ವಜನಿಕರ ಗಮನ ಸೆಳೆದರು.ಪಕ್ಕದ ಕೃಷ್ಣಾ ತೀರದ ಮಹಾರಾಷ್ಟ್ರದ ಶಿರೋಳ ತಾಲ್ಲೂಕು ಐತಿಹಾಸಿಕ ಖಿದ್ರಾಪುರದ ಶ್ರೀ ಕೊಪ್ಪೆಶ್ವರ ದೇಗುಲಕ್ಕೆ ತೆರಳಿ ಸಾಮೂಹಿಕವಾಗಿ ದರುಶನ ಪಡೆದು ವನಭೋಜನದೊಂದಿಗೆ ಸೈಕಲ್ ಜಾಥಾ ಅಂತ್ಯಗೊಂಡಿತು.

ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*.

Leave a Comment

Your email address will not be published. Required fields are marked *

error: Content is protected !!