ಮಕ್ಕಳ ಸಾಹಿತ್ಯ ಪರಿಷತ್ತು: ರಾಯಬಾಗ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕ

Share the Post Now

ಬೆಳಗಾವಿ.ರಾಯಬಾಗ:~* ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ರಾಯಬಾಗ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.


ಗೌರವಾಧ್ಯಕ್ಷರಾಗಿ ಖೇಮಲಾಪುರದ ಕನ್ನಡ ಪ್ರಾಧ್ಯಾಪಕರು ಹಾಗೂ ವರದಿಗಾರರು ಡಾ.ಜಯವೀರ ಎ.ಕೆ. ಭಿರಡಿ ಗ್ರಾಮದ ಕಲಾವಿದರು, ಜಾನಪದ ಕವಿ ಶ್ರೀ ಅಮರ ಎನ್. ಕಾಂಬಳೆ ತಾಲ್ಲೂಕು ಘಟಕದ ಅಧ್ಯಕ್ಷರು ರಾಯಬಾಗದ ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ವಿಲಾಸ ಕಾಂಬಳೆ ಉಪಾಧ್ಯಕ್ಷ ರು,ಯಲ್ಫಾರಟ್ಟಿಯ ಕನ್ನಡ ಉಪನ್ಯಾಸಕರು,ಕವಿ ಪ್ರೊ.ವಸಂತ ವಿ.ಬೆಕ್ಕೇರಿ ಕೋಶಾಧ್ಯಕ್ಷರು, ರಾಯಬಾಗದ ಕವಿ ಶ್ರೀ ಶ್ರೀಶೈಲಪ್ಪ ಹೊಸೂರ ಅವರು ಪ್ರಧಾನ ಕಾರ್ಯದರ್ಶಿ,

ಕುಡಚಿಯ ಕವಿ ಹಾಗೂ ಪ್ರಕಾಶಕರು,ಶಿಕ್ಷಕರಾದ ಶ್ರೀ ಎಂ.ಕೆ.ಶೇಖ್ ಸಹಕಾರ್ಯದರ್ಶಿ,ಪವಾಡಿ ಕಾಂಬಳೆ ಸಂಘಟನಾ ಕಾರ್ಯದರ್ಶಿ ,ಹಿಡಕಲ್ ದ ಶ್ರೀಮತಿ ಸುರೇಖಾ ಕುಳ್ಳೊಳ್ಳಿ ಮಹಿಳಾ ಕಾರ್ಯದರ್ಶಿ, ನಿರ್ದೇಶಕರಾಗಿ ಚಿಂಚಲಿಯ ಶ್ರೀ ರಮೇಶ ಕೋಳಿಗುಡ್ಡೆ ಜಲಾಲಪುರ ಗ್ರಾಮದ ಶಿಕ್ಷಕ ಶ್ರೀ ರಾಜೇಂದ್ರ ಕಾಂಬಳೆ ಹಾಗೂ ಭಿರಡಿಯ ಕನ್ನಡ ಅಧ್ಯಾಪಕಿ ಪ್ರೊ.ರುಕ್ಮಿಣಿ ಪಾಂಡ್ರೆ ಅವರನ್ನು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀ ಅಮರ ಎನ್ ಕಾಂಬಳೆ ನೇಮಕ ಮಾಡಿದ್ದಾರೆ.

ವರದಿ:ಡಾ.ಜಯವೀರ ಎ.ಕೆ*
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!