ಬೆಳಗಾವಿ.ರಾಯಬಾಗ:~* ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣ “ಶಕ್ತಿ” ಯೋಜನೆಗೆ ರಾಯಬಾಗದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಬೆಳಿಗ್ಗೆ ಕುಡಚಿ ಕ್ಷೇತ್ರದ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು.
ಮುಖಂಡ ಹಾಗೂ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಶ್ರೀ ಮಹಾವೀರ ಮೋಹಿತೆ,ಕ್ಷೇತ್ರದ ಅನೇಕ ಗಣ್ಯ ಮಾನ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬಸ್ ನಿಲ್ದಾಣದ ಸಿಬ್ಬಂದಿ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಧರ್ಮಪತ್ನಿ ಶ್ರೀಮತಿ ಸಚೀನಾ ಮಹೇಂದ್ರ ತಮ್ಮಣ್ಣವರ ಅವರು ಸಾಂಕೇತಿಕವಾಗಿ ಬಸ್ ನಲ್ಲಿ ಕುಳಿತು ನಿರ್ವಾಹಕರಿಂದ ಉಚಿತ ಬಸ್ ಟಿಕೆಟ್ ಪಡೆದುಕೊಂಡಿದ್ದು ಗಮನಾರ್ಹವಾಗಿತ್ತು.ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಅವರು ಶ್ರೀಮತಿ ಸಚೀನಾ ಅವರ ಜೊತೆಗೆ ಸಹಪ್ರಯಾಣಿಕರಾಗಿ ಸಾಥ್ ನೀಡಿದರು.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





