ಹಳ್ಳೂರ . ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ವಾರ ಹಿಡಿಯುವ ಕಾರ್ಯಕ್ರಮವನ್ನು ದಿ 13 ಮಂಗಳವಾರ ದಂದು ಮೊದಲನೇ ವಾರ ಪ್ರಾರಂಬವಾಗಿ ಶುಕ್ರವಾರ , ಹಿಡಿದು ದಿ,27 ಮಂಗಳವಾರ ಕಡೆ ವಾರ ಕಾರ್ಯಕ್ರಮ ಜರುಗುವುದು. ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರು ತೀರ್ಮಾನ ಕೈಗೊಳ್ಳಲಾಗಿದೆ.
ಹಳ್ಳೂರ ಗ್ರಾಮದಲ್ಲಿ ಶ್ರೀ ಗುರು ವಿಶ್ವರಾದ್ಯ ನಾಟ್ಯ ಸಂಘ ಜೀವರ್ಗಿ ಇವರಿಂದ ದಿನಾಲೂ ಸಂಜೆ 6.15 ಹಾಗೂ 10 ಗಂಟೆಗೆ ದಿನಾಲೂ 2 ಆಟಗಳು ಪುಲ್ ಕಾಮಿಡಿ ನಾಟಕ ನಡೆಯುತ್ತವೆ. ಮಂಗಳವಾರ ದಿಂದ 3 ನಾಟಕ ಬಸ್ ಬಸ್ ಕಂಡಕ್ಟರ್ ಅರ್ಥಾತ್ ಖಾನಾವಳಿ ಚನ್ನಿ ನಾಟಕ ನಂತರ ನಡೆಯುವ ನಾಟಕ ನನ ಗಂಡ ಬಲು ಭಂಡ ಎಂಬ ಕಾಮಿಡಿ ನಾಟಕದಲ್ಲಿ ಗಿಣಿ ರಾಮ ಧಾರಾವಾಹಿಯಲ್ಲಿ ನಟಿಸಿದಂತ ಬಸವರಾಜ ತಿರ್ಲಾಪೂರ ಇವರು ಪ್ರಮುಖ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವರು ಇನ್ನೂ ಕೆಲವು ದಿನಗಳು ಮಾತ್ರ ಹಳ್ಳೂರ ಗ್ರಾಮದಲ್ಲಿ ನಡೆಯುವುದು ಆದಕಾರಣ ಹಳ್ಳೂರ ಹಾಗೂ ಸುತ್ತಮುತ್ತಲಿನ ಪ್ರೇಕ್ಷಕರು ಕುಟುಂಬ ಸಮೇತ ಬಂದು ನಾಟಕವನ್ನು ನೋಡಬೇಕೆಂದು ನಾಟಕ ಕಂಪನಿ ಮಾಲೀಕರಾದ ಆಯ್ಯನ ಸ್ವಾಮಿ ಹೀರೆಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





