ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ
ಮುಗಳಖೋಡ : ಅಕ್ಷರದ ಅವ್ವ ಎಂದು ಪ್ರಖ್ಯಾತರಾದ ಮಾತೋಶ್ರೀ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದಕ್ಕಾಗಿ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಮಸ್ತ ಮಂತ್ರಿಮಂಡಲಕ್ಕೆ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಹಾಗೂ ಮಾಳಿ ಮಾಲಾಗಾರ ಸಮಾಜದ ಎಲ್ಲ ಜನತೆ ಅನಂತ ಕೋಟಿ ಅಭಿನಂದನೆಗಳನ್ನು ಸಲ್ಲಿಸಿದರು
ಹಾಗೂ ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಳಿ ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮವನ್ನು ನೀಡಿ ಆದೇಶ ಹೊರಡಿಸಿದೆ. ಇದನ್ನು ಸರಿಪಡಿಸಿ ಪ್ರತ್ಯೇಕ ಮಾಳಿ ಮಾಲಗಾರ ಸಮಾಜ ಅಭಿವೃದ್ಧಿ ನಿಗಮದ ಆದೇಶವನ್ನು ಹೊರಡಿಸಿ ಕಾರ್ಯರೂಪಕ್ಕೆ ತರಬೇಕು ಮತ್ತು ಹಿಂದಿನ ಸರ್ಕಾರ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಕೊಡಲು ನಿರ್ಧರಿಸಿದ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಯನ್ನು ನೀಡಲು ಜಾರಿಗೆ ತರಬೇಕೆಂದು ಸಮಸ್ತ ಮಾಳಿ ಮಾಲಗಾರ ಸಮಾಜದ ವತಿಯಿಂದ ವಿನಂತಿಸಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಕಾಡು ಮಾಳಿ, ಗಿರೀಶ್ ಬೂಟಾಳಿ, ಚೇತನ ಯಡವನ್ನವರ, ಶಿವಾನಂದ ದಿವಾನಮಳ್ಳ, ಕಾಶಿನಾಥ್ ಮಾಳಿ, ಬಸವರಾಜ ಮರನೂರು, ಸದಾಶಿವ ಹೊಸಮನಿ, ಪಂಡಿತ್ ಸೆರಿಕರ್ ಅವರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದರೊಂದಿಗೆ ಉಪಸ್ಥಿತರಿದ್ದರು.





