ರಾಯಬಾಗ*: ದೇಹ ಮತ್ತು ಮನಸ್ಸಿನ ಸಮತೋಲನದ ಮಹತ್ವವನ್ನು ಸದೃಢ ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾದ ವಿದ್ಯಾರ್ಥಿಗಳು ಅರಿಯಬೇಕು ಎಂದು ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿಪತಿಗಳಾದ ಪೂಜ್ಯ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.
ಅವರು ಮಂಗಳವಾರ ದಿನಾಂಕ 20 ರಂದು ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು.
ಇಚ್ಚಾಶಕ್ತಿ ,ಜ್ಞಾನಶಕ್ತಿ,ಕ್ರಿಯಾಶಕ್ತಿಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಮಾತ್ರ ಜೀವನ ಪರಿವರ್ತನೆ ಆಗಲು ಸಾಧ್ಯ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀ ಶಿವಾನಂದ ಪಾಟೀಲ ಅವರು ಮಾತನಾಡಿ “ದ್ಯಾನ ಮತ್ತು ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದನ್ನು ಈ ಎನ್. ಎಸ್.ಎಸ್.ಶಿಬಿರ ಚೆನ್ನಾಗಿ ಕಲಿಸಿಕೊಡುತ್ತದೆ ಎಂದು ನುಡಿದರು. ಕಾಯಾ ವಾಚಾ ಮನಸ್ಸಿನಿಂದ ಸೇವಾಕಾರ್ಯಾದಲ್ಲಿ ಪಾಲ್ಗೊಂಡು ಶಿಬಿರದ ಮೆರುಗು ಇಮ್ಮಡಿಗೊಳಿಸಬೇಕೆಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಇದಕ್ಕೂ ಮೊದಲು ಆಗಮಿಸಿದ್ದ ಗಣ್ಯರು ಸ್ವಾಮಿ ವಿವೇಕಾನಂದರು ಹಾಗೂ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವೇದಿಕೆ ಮೇಲೆ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾದ ಶ್ರೀ ಶಿವಾನಂದ ಬಿ.ಪಾಟೀಲ ಹಾಗೂ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು ಪೂಜ್ಯ ಡಾ ಅಭಿನವ ಬ್ರಹ್ಮಾನಂದ ಮಹಾಸ್ವಾಮೀಜಿಯವರನ್ನು ಸತ್ಕರಿಸಿದರು.ಕಾಲೇಜಿನ ಬಿ.ಕಾಂ.ಅಂತಿಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿ ಕು.ಪೂಜಾ ಝoಡೆ ಟಾಟಾ ಕನ್ಸಲ್ ಟನ್ಸಿ ಸರ್ವೀಸ್ನಲ್ಲಿ ಪ್ಲೇಸ್ಮೆಂಟ್ ಪಡೆದ ಪ್ರಯುಕ್ತ ವೇದಿಕೆ ಮೇಲಿನ ಗಣ್ಯ ಮಾನ್ಯರು ಸತ್ಕರಿಸಿದರು. ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅಧ್ಯಕ್ಷೀಯ ಆಶಯ ನುಡಿ ಹಂಚಿಕೊಂಡರು. ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಮಂಜುಳಾ ರಾಮಾ ಐಹೊಳ್ಳಿ,ಉಪಾಧ್ಯಕ್ಷ ಶ್ರೀ ಶಶಿಕಾಂತ ಧನವಾಡೆ,
ಇಂಗಳಿ ಗ್ರಾ.ಪಂ.ಸದಸ್ಯರಾದ ಶ್ರೀ ಚಂದ್ರಕಾಂತ ಶಿರಹಟ್ಟಿ,ಶ್ರೀ ಸಂಜಯ ಗುರವ, ನ್ಯಾಯವಾದಿ ಶ್ರೀ ಅಪ್ಪಾಸಾಬ ಪಾಟೀಲ, ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಾಮಗೌಡ ಪಾಟೀಲ ಹಾಗೂ ಗ್ರಾ.ಪಂ.ಯ ಸಕಲ ಸದಸ್ಯರು,ಶಿಬಿರಾಧಿಕಾರಿ ಶ್ರೀ ಎಂ.ಎಸ್.ಕೌಲಗುಡ್ಡ,ಸಹಾಯಕ ಶಿಬಿರಾದಿಕಾರಿ ಪ್ರೊ.ಎಲ್.ಎಸ್.ವಂಟಮೂರೆ ಹಾಗೂ ಎಲ್ಲ ಉಪನ್ಯಾಸಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಪದವಿ
ಕಾಲೇಜಿನ ವಾಣಿಜ್ಯ ವಿಭಾಗದ ಸಂಯೋಜಕರಾದ ಪ್ರೊ.ಎಲ್.ಎಸ್.ವಂಟಮೂರೆ ಪ್ರಾಸ್ತಾವಿಕ ನುಡಿಯಾಡಿದರು.ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ.ಅವರು ಸ್ವಾಗತಿಸಿ, ಸಮ್ಮಾನ ಕಾರ್ಯಕ್ರಮ ಪ್ರಸ್ತುತಪಡಿಸಿದರು.ಕು.ಸ್ವಾತಿ ಪನದೆ ಹಾಗೂ ಪೂಜಾ ಝoಡೆ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಕು.ಲಕ್ಷ್ಮಿ ಘೋಸರವಾಡೆ ಶರಣು ಸಮರ್ಪಿಸಿದರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





