ರಾಯಬಾಗ*l:~ಜನಪದರು ಅಕ್ಷರದ ಗಂಧವಿಲ್ಲದ ಮುಗ್ದರು,ಮಣ್ಣಿನ ಮಕ್ಕಳಾದ ಜನಪದರು ಶ್ರೀಮಂತ ಸಂಸ್ಕೃತಿಯ ವಾರಸುದಾರರು ಎಂದು ರಬಕವಿಯ ಕೆ.ಎಸ್.ಗೌತಮ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರು ಖ್ಯಾತ ಕಲಾವಿದರಾದ ಪ್ರೊ.ಎಸ್.ಜಿ.ಕೆಂಧೂಳಿ ಅಭಿಮತ ವ್ಯಕ್ತಪಡಿಸಿದರು
ಅವರು ಕೆ.ಎಲ್.ಇ. ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯ” ಕುರಿತು ಉಪನ್ಯಾಸ ನೀಡಿದರು. ಜಾನಪದ ಗರತಿ ಸಾಹಿತ್ಯದ ಒಡತಿ.ನಮ್ಮ ಜನಪದ ಸಾಹಿತ್ಯದಲ್ಲಿ ಅನನ್ಯ ಸಾಂಸ್ಕೃತಿಕ ಮೌಲ್ಯಗಳು ಹಾಸುಹೊಕ್ಕಾಗಿವೆ.ಜನಪದ ತ್ರಿಪದಿಗಳಲ್ಲಿ ಅಡಗಿರುವ ಮೌಲ್ಯಗಳನ್ನು ಸ್ವಾರಸ್ಯಕರವಾಗಿ ವಿಶ್ಲೇಷಿಸಿ ಸುಶ್ರಾವ್ಯವಾಗಿ ಹಾಡಿ ಶಿಬಿರಾರ್ಥಿಗಳನ್ನು ನಗೆಗಡಲಲ್ಲಿ ಮುಳುಗಿಸಿ ಜನಮನಸೂರೆಗೊಂಡರು.
ಇದಕ್ಕೂ ಮೊದಲು ಆಗಮಿಸಿದ್ದ ಗಣ್ಯರು ಅನ್ನದಾತನ ಮೂಲ ಕೃಷಿ ಸಲಕರಣೆ ನೇಗಿಲಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ.ಅವರು “ವಿಶ್ವ ಸಾಹಿತ್ಯಕ್ಕೆ ನಮ್ಮ ಜನಪದ ಸಾಹಿತ್ಯದ ಕೊಡುಗೆ ಅತ್ಯಂತ ಅಪಾರ.ಸಮುದ್ರದಷ್ಟು ಆಳವಾದ ಆಕಾಶದಷ್ಟು ವಿಶಾಲವಾದ ಜನಪದ ಸಾಹಿತ್ಯದ ಮೌಲ್ಯವನ್ನು ಪ್ರೊ.ಕೆಂಧೂಳಿ ಅವರು ಕರಿಯನ್ನು ಕನ್ನಡಿಯಲ್ಲಿ ತೋರಿಸಿದ್ದಾರೆ. ಎಂದು ತಮ್ಮ ಅಧ್ಯಕ್ಷೀಯ ಆಶಯ ನುಡಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ.ಎಸ್.ಜಿ.ಕೆಂಧೂಳಿ ಅವರನ್ನು ವೇದಿಕೆ ಮೇಲಿನ ಗಣ್ಯರು ಸನ್ಮಾನಿಸಿದರು. ಪದವಿ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಆಯ್ ಎ.ಪಾಟೀಲ,ಶ್ರೀ ಶಂಕರ ಪವಾರ,ಶ್ರೀ ಅಪ್ಪಾಸಾಬ ಚೌಗಲೆ,ಸಲಿಂ ಹನಗಂಡಿ, ಶಿಬಿರಾಧಿಕಾರಿ ಶ್ರೀ ಎಂ.ಎಸ್.ಕೌಲಗುಡ್ಡ ಸಹಾಯಕ ಶಿಬಿರಾಧಿಕಾರಿ ಪ್ರೊ.ಎಲ್.ಎಸ್.ವಂಟಮೂರೆ.ಪ್ರೊ.ರಾಧಿಕಾ ಯಾದವ, ಹಾಗೂ ಮತ್ತಿತರರು.ವೇದಿಕೆ ಮೇಲೆ ಉಪಸ್ಥಿತರಿದ್ದರು. ಎನ್. ಎಸ್.ಎಸ್.ಸ್ವಯಂ ಸೇವಕರು ತಳಿರು ತೋರಣ,ಕಟ್ಟಿ ಮುಂಭಾಗದಲ್ಲಿ ನೇಗಿಲುಗಳನ್ನು ಇರಿಸಿ ವೇದಿಕೆಯ ಮೆರುಗು ಇಮ್ಮಡಿಗೊಳಿಸಿದ್ದು ಮನಾಕರ್ಷಿಸಿತು.ಪ್ರಾರಂಭದಲ್ಲಿ ಕು.ಜ್ಯೋತಿ ವಡ್ಡರ ಸ್ವಾಗತಿಸಿದರು. ಕು.ದರ್ಶನ ಬನಾಜ, ಹಾಗೂ ಕು.ಸಮೀಕ್ಷಾ ಶಿರಗುಪ್ಪೆ, ನಿರೂಪಿಸಿದರು. ಕೊನೆಗೆ ಪ್ರಿಯಂಕಾ ಢಂಗ ಶರಣು ಸಮರ್ಪಿಸಿದರು.
ವರದಿ:~ ಡಾ.ಜಯವೀರ ಎ.ಕೆ*.
*ಖೇಮಲಾಪುರ*





