ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠ ವಾದುದು:ಶ್ರೀ.ಸತ್ಯಪ್ಪ ಪಿ.ಬಾನೆ

Share the Post Now

ಬೆಳಗಾವಿ.ರಾಯಬಾಗ*:~ ಮನುಷ್ಯ ಈ ಕಾಲಘಟ್ಟದಲ್ಲಿ ಎಷ್ಟೇ ಗಳಿಸಿದರೂ ವ್ಯರ್ಥ. ಆರೋಗ್ಯವಿದ್ದರೆ ಮಾತ್ರ ಎಲ್ಲರೂ ಸೌಖ್ಯವಾಗಿರಲು ಸಾಧ್ಯ. ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠವಾದದ್ದು ಎಂದು ಜಯಸಿಂಗಪುರ ಪಾಯಸ ಆಸ್ಪತ್ರೆಯ ಕರ್ನಾಟಕದ ಸಂಯೋಜಕರಾದ ಶ್ರೀ ಸತ್ಯಪ್ಪ ಬಾನೆ ಅಭಿಮತ ವ್ಯಕ್ತಪಡಿಸಿದರು.



ಅವರು ಶುಕ್ರವಾರ ದಿನಾಂಕ 23 ರಂದು ಬೆಳಿಗ್ಗೆ ಕೆ.ಎಲ್.ಇ ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ಉಚಿತ ಕಣ್ಣು ಮತ್ತು ಎಲುಬು ಕೀಲುಗಳ ತಪಾಸಣಾ ಶಿಬಿರಕ್ಕೆ” ಚಾಲನೆ ನೀಡಿ ಮಾತನಾಡಿದರು.


ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಎನ್,ಎಸ್,ಎಸ್ ಶಿಬಿರಗಳು ಅತ್ಯಂತ ಪ್ರಯೋಜನಕಾರಿ ಎಂದು ನುಡಿದರು. ವೈದ್ಯರಾದ ಡಾ.ರಶೀದಾ ಎನ್, ಡಾ.ಪ್ರಜಕ್ತಾ, ಡಾ.ಸಾರೀಖಾ, ಡಾ.ಯೋಗೇಶ್ ಮೇತ್ರೆ, ಚೇತನ ಕೋಕಾಟೆ, ಇಂಗಳಿ ಗ್ರಾಮದ ಗಣ್ಯರಾದ ಶ್ರೀ ಅಣ್ಣಾಸಾಬ ಚೌಗಲಾ, ಶ್ರೀ ಹಮೀದ್ ಮುಲ್ಲಾ, ಶ್ರೀ ಪಪ್ಪು ಮುಲ್ಲಾ, ಶ್ರೀ ಸಿಕಂದರ್ ಮಲಿಕ್, ಶಿಬಿರಾಧಿಕಾರಿ. ಶ್ರೀ ಎಂ ಎಸ್ ಕೌಲಗುಡ್ಡ, ಸಹಾಯಕ ಶಿಬಿರಾಧಿಕಾರಿ ಪ್ರೊ. ಎಲ್ಎಸ್ ವಂಟಮೂರೆ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಜಯವೀರ ಎ.ಕೆ. ಸ್ವಾಗತಿಸಿ ನಿರೂಪಿಸಿದರು.

ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!