ಯೋಗದಿಂದ ರೋಗ ನಿವಾರಣೆ:ಟಿ.ಎಸ್ ವಂಟಗೂಡಿ ಅಭಿಮತ

Share the Post Now

ಬೆಳಗಾವಿ.ರಾಯಬಾಗ*:~ ತಾಲ್ಲೂಕಿನ ಹಿಡಕಲ್ಲ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಬಾಗ, ಇವರ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಇತ್ತೀಚೆಗೆ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಮೂಡಲಗಿ ಆರ್. ಡಿ. ಎಸ್ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಹಾಗೂ ಸಾಂಸ್ಕೃತಿಕ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷ ಸಾಹಿತಿ ಟಿ. ಎಸ್. ವಂಟಗೂಡಿ ಮಾತನಾಡಿ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ನೆಲೆಸಬೇಕಾದರೆ ಪ್ರತಿಯೊಬ್ಬರೂ ಅವರ ದೇಹ ರಚನೆಗೆ ಅನುಗುಣವಾಗಿ ಯೋಗ ಕಲಿಯುವ ಅವಶ್ಯಕತೆ ಇದೆ.

ಯೋಗದಲ್ಲಿ ಆನಂದವಿದೆ ಸರ್ವ ರೋಗಕ್ಕೂ ಯೋಗ ಮದ್ದು. ಅಲ್ಪ ಅನ್ನ ಸೇವನೆ,ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡುವುದರ ಮೂಲಕ ಉತ್ತಮ ಆರೋಗ್ಯ ಪಡೆಯಬೇಕು ಯೋಗದಿಂದ ರೋಗ ನಿವಾರಣೆ ಆಗುವುದು ಎಂದು ಸಾಹಿತಿ ಟಿ. ಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಾಂಸ್ಕೃತಿಕ ಪರಿಷತ್ತು ಸಂಘಟನಾ ಕಾರ್ಯದರ್ಶಿ ಕಲ್ಮೇಶ ಸತ್ತಿ ಸಾಂಸ್ಕೃತಿಕ ಪರಿಷತ್ತು ಉಪಾಧ್ಯಕ್ಷ ಬಿ.ಎಲ್. ಘಂಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಮಾರಂಭದಲ್ಲಿ ಅಶೋಕ ಪೂಜೇರಿ ರಾಮು ವಂಟಗೂಡಿ, ಕರೆಪ್ಪ ವಂಟಗೂಡಿ, ಅಮೀತ ಪೂಜೇರಿ, ಬಸವರಾಜ ಸತ್ತಿ, ಮೀನಾಕ್ಷಿ ವಂಟಗೂಡಿ ಉಪಸ್ಥಿತರಿದ್ದರು. ಹಾಲಸಿದ್ದ ವಂಟಗೂಡಿ ಸ್ವಾಗತಿಸಿದರು ಬಸವರಾಜ ಸತ್ತಿ ನಿರೂಪಿಸಿದರು ವಿವೇಕ ವಂಟಗೂಡಿ ವಂದಿಸಿದರು.

ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!