ಹಳ್ಳೂರ . ಶುಕ್ರವಾರ ದಂದು ಹಳ್ಳೂರ ಗ್ರಾಮದಲ್ಲಿ ಶ್ರೀ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ವಾರ ಹಿಡಿಯುವ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಳೆ ಬೆಳೆ ಚೆನ್ನಾಗಿ ಆಗಿ ಸುಖ ಸಮೃದ್ಧಿ ತರಲಿ ಎಂದು ಪ್ರತಿ ವರ್ಷ ದಂತೆ ಈ ವರ್ಷವೂ ಕೂಡಾ ಹಳ್ಳೂರ , ಕಪ್ಪಲಗುದ್ದಿ, ಶಿವಾಪೂರ ಗ್ರಾಮದವರು ಕಟ್ಟು ನಿಟ್ಟಾಗಿ ವಾರದ ಕಾರ್ಯಕ್ರಮವನ್ನು ಪಾಲಿಸಿದರು.
ಶುಕ್ರವಾರ 4 ನೆ ವಾರದ ದಿನ ದಂದು ಶ್ರೀ ಮಹಾಲಕ್ಷ್ಮೀ ದೇವರ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು, ಭಕ್ತಿ ಗೀತೆಗಳು ನಡೆದ ಸಂದರ್ಭದಲ್ಲಿ ವರುಣನ ಕೃಪೆ ಆಗಿ ಮಳೆ ಆಯಿತು. ಬರಗಾಲ ಹೆಚ್ಚಾಗಿ ರೈತರು ನೀರಿಲ್ಲದೆ ಕಂಗಾಲಾಗಿದ್ದರು ಮಳೆರಾಯ ಬೂಮಿಗೆ ಅಪ್ಪಳಿಸಿದಾಗ ಎಲ್ಲರ ಮುಖದಲ್ಲಿ ಸಂತೋಷದ ಛಾಯೆ ಮೂಡಿ ಬಂದಿತ್ತು. ಗ್ರಾಮದ ಎಲ್ಲ ದೇವರಿಗೆ ಮಹಿಳೆಯರು ನೈವೇದ್ಯ ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮಸ್ಥರಿದ್ದರು.





