ಹಳ್ಳೂರ . ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವವು 17 ನೆ ವರ್ಷದ ನಂತರ ನಡೆದ ಜಾತ್ರೆ ಬಹಳ ಅದ್ದೂರಿಯಾಗಿ ನಡೆದಿದ್ದು ಬಹಳ ಸಂತೋಷದ ಸಂಗತಿಯಾಗಿದೆ ಎಂದು ಕೆ ಎ ಮ್ ನಿರ್ದೇಶಕರು ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಅವರು ಮಂಗಳವಾರದಂದು ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಕಡೆ ವಾರದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಜಾತ್ರೆ ಐತಿಹಾಸಿಕ ಪ್ರಸಿದ್ಧವಾಗಲಿಕ್ಕೆ ಹಳ್ಳೂರ, ಕಪ್ಪಲಗುದ್ದಿ. ಶಿವಾಪೂರ ಗ್ರಾಮದ ಎಲ್ಲ ಪ್ರಮುಖರು ಒಗ್ಗಟ್ಟಿನಿಂದ ಪ್ರಾಮಾಣಿಕ ಸೇವೆ ಮಾಡಿ ದೇವರ ಪ್ರೀತಿಗೆ ಪಾತ್ರರಾಗಿದ್ದಿರಿ. ಆ ದೇವರು ಮಳೆ ಆಗಿ ಒಳ್ಳೆಯ ಬೆಳೆ ಬಂದು ನೀವೆಲ್ಲ ಸುಖ ಶಾಂತಿಯಿಂದ ಸಹಬಾಳ್ವೆ ನೆಮ್ಮದಿಯಿಂದ ಸುಖ ಜೀವನ ನಡೆಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು. ಮೊನ್ನೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಹಳ್ಳೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಅತೀ ಹೆಚ್ಚು ಮತಗಳನ್ನು ನೀಡಿ ಅಂತರದಿಂದ ಗೆಲುವು ತಂದುಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಹಳ್ಳೂರ ಗ್ರಾಮಕ್ಕೆ ಹೊಸದಾಗಿ ಪಿ ಡಿ ಓ ಕಾರ್ಯ ನಿರ್ವಹಿಸುತ್ತಿದ್ದಾರೆ ಗ್ರಾಮದ ಅಭಿೃದ್ಧಿ ಗೆ ಎಲ್ಲರೂ ಒಂದಾಗಿ ಶ್ರಮಿಸಬೇಕೆಂದು ಹೇಳಿದರು. ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗ್ರಾಮದ ಪಂಚಮಸಾಲಿ ಹಾಗೂ ತೋಟಗೇರ ದೈವ ಹಾಗೂ ಹಳ್ಳೂರ, ಶಿವಾಪೂರ, ಕಪ್ಪಲಗುದ್ದಿ ಗ್ರಾಮದ ಪ್ರಮುಖರಿಂದ ಸನ್ಮಾನ, ಹಾಗೂ ದ್ಯಾಮವ್ವ ದೇವಸ್ಥಾನ ಅರ್ಚಕರಿಂದ ಮತ್ತು ತೋಟಗೇರ ದೈವದ ಮನೆಯಲ್ಲಿ ಸನ್ಮಾನ ಮಾಡಿ ದೇವರ ಫೋಟೋ ನೀಡಿ ಗೌರವಿಸಿದರು. ಈ ಸಂದರ್ಬದಲ್ಲಿ ಪಿ ಎಸ್ ಐ ಹಾಲಪ್ಪ ಬಾಲದಂಡಿ. ಪಿ ಡಿ ಓ ಹಣಮಂತ ತಾಳಿಕೋಟಿ ಹಾಗೂ ರಂಗಪ್ಪ ಗುಜನಟ್ಟಿ. ಕಾರ್ಯದರ್ಶಿ ಕಿಶೋರ ಗಣಾಚಾರಿ . ಬಸವರಾಜ ಕೌಜಲಗಿ ಅವರಿಗೆ ಸನ್ಮಾನ ಮಾಡಿ ದೇವರ ಫೋಟೋ ನೀಡಿ ಗೌರವಿಸಿದರು.
ಯುವ ಸಂಘಟಕ ಸಿದ್ದಣ್ಣ ದುರದುಂಡಿ ಸ್ವಾಗತಿಸಿ. ಸಾಮಾಜ ಸೇವಕ ಮುರಿಗೆಪ್ಪ ಮಾಲಗಾರ ನಿರೂಪಿಸಿ. ಶಿಕ್ಷಕ ಸತ್ಯ ನಾರಾಯಣ ತಮದಡ್ಡಿ ವಂದಿಸಿದರು.





