ಗಂಗಾವತಿ:ತಾಲೂಕಿನ ಹೇರೂರ ಗ್ರಾಮವನ್ನು ಹೊಸ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬದಲಾಗಿ ಗಂಗಾವತಿ ನಗರದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಒತ್ತಾಯಿಸಿದ್ದಾರೆ.
ಕನಕಗಿರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಹೇರೂರ ಗ್ರಾಮವು ಪ್ರಸ್ತುತ ಹೊಸಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತದೆ.ಹೇರೂರ ಗ್ರಾಮಸ್ಥರು,ವಿಧವಾ ವೇತನ, ಅಂಗ ವಿಕಲರ ವೇತನ ಮುಂತಾದ ಆದೇಶದ ಪ್ರತಿಗಳಿಗಾಗಿ ಹೊಸಗೇರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ.
ಹೇರೂರ ಗ್ರಾಮದಿಂದ ಹೊಸ್ಕೇರಾ ಗ್ರಾಮಕ್ಕೆ ರಸ್ತೆ ಮತ್ತು ವಾಹನದ ವ್ಯವಸ್ಥೆ ಇರುವುದಿಲ್ಲ.ಹೀಗಾಗಿ ಗಂಗಾವತಿ ನಗರದ ಮೂಲಕ ಅದೂ ಕೂಡ
ಟೋಲ್ ಶುಲ್ಕ ಪಾವತಿಸಿ, ಹೊಸ್ಕೇರಾ ಗ್ರಾಮದ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಆದ್ದರಿಂದ ಹೇರೂರ ಗ್ರಾಮವನ್ನು ಗಂಗಾವತಿ ನಗರದ ಸಾರ್ವಜನಿಕ ಆಸ್ಪತ್ರೆಯ ವ್ಯಾಪ್ತಿಗೆ
ಒಳಪಡಿಸಬೇಕೆಂದು ಕನ್ನಡ ಮತ್ತು ಸಂಸ್ಕ್ರತಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಶೋಕಸ್ವಾಮಿ ಹೇರೂರ ಮನವಿ ಸಲ್ಲಿಸಿದ್ದಾರೆ.





