2020 ರ ವರೆಗೆ ಚಾಲ್ತಿಯಲ್ಲಿರುವ ಪದವಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಸಭೆ.

Share the Post Now

ವರದಿ: ಸಂಗಮೇಶ ಹಿರೇಮಠ.

ಬೆಳಗಾವಿ

ಮುಗಳಖೋಡ: ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಶ್ರೀ ಮಾನ್ಯ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಮಂತ್ರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಇವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಬೆಟ್ಟಿ ಮಾಡುವವರಿದ್ದು.

ಕಾರಣ ಬರುವ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ಯಾವುದೇ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಮನವಿ ಮಾಡಿಕೊಳ್ಳಲು ಅನುದಾನಿತ ಕಾಲೇಜುಗಳಲ್ಲಿ ಅನುದಾನ ರಹಿತವಾಗಿ ನಡೆಯುತ್ತಿರುವ ಸಂಯೋಜನೆಗಳಿಗೆ ಅನುದಾನ ನೀಡುವ ಕುರಿತು ಮತ್ತು 2020 ರವರೆಗೆ ಚಾಲ್ತಿಯಲ್ಲಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಪದವಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಚರ್ಚೆ ನಡೆಸಲು ಮುಖ್ಯೋಪಾಧ್ಯಾಯರು,

ಪ್ರಾಚಾರ್ಯರು ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರುಗಳೊಂದಿಗೆ ಬೆಂಗಳೂರಿನ ರೇಸೋ ಹೋಟೆಲಿನಲ್ಲಿ ಬುಧವಾರ ಜುಲೈ 5 ರಂದು ಮುಂಜಾನೆ 9 ರಿಂದ 10 ಗಂಟೆಯ ಒಳಗಾಗಿ ಹಾಜರಿರಲು ಮುಗಳಖೋಡ ಪಟ್ಟಣದ ಶ್ರೀ ಚ ವಿ ವ ಸಂಘದ ಅಧ್ಯಕ್ಷರಾದ ಡಾ. ಸಿ ಬಿ ಕುಲಿಗೋಡ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880509322 ಡಾ.ಸಿ.ಬಿ.ಕುಲಿಗೋಡ ಮುಗಳಖೋಡ.

Leave a Comment

Your email address will not be published. Required fields are marked *

error: Content is protected !!