ತಾವರಗೇರಾ ಮತ್ತು ಹನುಮಸಾಗರ ತಾಲೂಕು ರಚನೆಗೆ ಒತ್ತಾಯ.

Share the Post Now

ಗಂಗಾವತಿ:ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನೂತನವಾಗಿ ತಾವರಗೇರಾ ಮತ್ತು ಹನುಮಸಾಗರ ಪಟ್ಟಣಗಳನ್ನು ನೂತನ ತಾಲೂಕುಗಳನ್ನಾಗಿ ರಚಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಒತ್ತಾಯಿಸಿದ್ದಾರೆ.



ಅವರು ಶನಿವಾರ ಸಾಯಂಕಾಲ ತಾಲೂಕು ಕನ್ನಡ ಸಾಹಿತ್ಯ ಭವನದಲ್ಲಿ ಕರೆದ ಕಿಷ್ಕಿಂದಾ ಜಿಲ್ಲಾ ಹೋರಾಟ ಸಮಿತಿಯ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಈ ಎರಡೂ ಪಟ್ಟಣಗಳು ತಾಲೂಕು ಸ್ಥಾನದಿಂದ ವಂಚಿತವಾಗಿವೆ ಎಂದವರು ಅಭಿಪ್ರಾಯ ಪಟ್ಟರು.ನವಲಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿದರು.



ಗಂಗಾವತಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ವಿಷಯದಲ್ಲೂ ಈ ನೂತನ ಜಿಲ್ಲಾ ಹೋರಾಟ ಸಮಿತಿ ಪ್ರಯತ್ನಿಸಬೇಕೆಂದು ಹೇಳಿದರು. ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಎಚ್.ಆರ್.ಶೀನಾಥ,ಲಲಿತಾ ರಾಣಿ ಶ್ರೀರಂಗದೇವರಾಯಲು,ಎಚ್.ಎಮ್.ಶೈಲಜಾ,ಮನೋಹರಗೌಡ ಹೇರೂರ,ಜೆ.ಚನ್ನಬಸವ,ರಾಜೇಶ್ ರೆಡ್ಡಿ, ಶರಣಬಸಪ್ಪ ಕೊಲ್ಕಾರ,ಪವನ ಕುಮಾರ,ಜೋಗದ ಹನುಮಂತಪ್ಪ ನಾಯಕ್,ಚನ್ನಬಸಯ್ಯ ಸ್ವಾಮಿ ಮುಂತಾದವರು ಮಾತನಾಡಿದರು.



ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಉಪಾಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಉದ್ಯಮಿಗಳಾದ ಪೂಲಭಾವಿ ಸಂಗಪ್ಪ ಇತರರು ಉಪಸ್ಥಿತರಿದ್ದರು.

ಶ್ರೀನಿವಾಸ್ ಎಮ್.ಜೆ.ಮತ್ತು ಎಚ್.ಎಮ್. ಮಂಜುನಾಥ,ಮಂಜು ಕಟ್ಟಿಮನಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

error: Content is protected !!