ಇಂದಿನ ಬಾಲಕರು ನಾಳಿನ ನಾಡಿನ ನಾಯಕರು:ಆರ್.ಎಮ್.ಪಾಟೀಲ

Share the Post Now

ಬೆಳಗಾವಿ.ರಾಯಬಾಗ:* ನೆರೆಯ ಅಥಣಿ ತಾಲ್ಲೂಕಿನ ಕಡೆಯ ಗ್ರಾಮ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಶಾಲಾ ಸಂಸತ್ತು ಇತ್ತೀಚೆಗೆ ಚುನಾವಣೆ ಜರುಗಿತು.ಶಾಲಾ ಸಂಸತ್ತಿಗೆ ಆಯ್ಕೆಯಾದ ಸದಸ್ಯರನ್ನು ಉದ್ಧೇಶಿಸಿ ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಮಾತನಾಡಿ “ಇಂದಿನ ಬಾಲಕರು ನಾಳಿನ ನಾಡಿನ ನಾಯಕರು”.ಸೇವೆˌತ್ಯಾಗ ಗುಣಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ಕರೆಯಿತ್ತರು.


ಪ್ರಧಾನ ಕಾರ್ಯದರ್ಶಿಯಾಗಿ ಸಾವಿತ್ರಿ ಮಾಳಿˌವಿದ್ಯಾರ್ಥಿನಿ ಪ್ರತಿನಿಧಿಯಾಗಿ ಶ್ರೀದೇವಿ ಗುಡೋಡಗಿˌಎಂಟನೆಯ ತರಗತಿಯಿಂದ ಪ್ರಜ್ವಲ ತೇಲಿˌಶ್ರದ್ಧಾ ನಾವಿ ಒಂಭತ್ತನೆಯ ವರ್ಗದಿಂದ ಪೃಥ್ವಿರಾಜ ಕೋಳಿಗುಡ್ಡˌಪ್ರೀಯಾ ಮುದವಿˌದಾವಲಸಾಬ ಅರಳಿಕಟ್ಟಿˌಅಕ್ಷತಾ ಕತ್ತಿˌಹತ್ತನೆಯ ತರಗತಿಯಿಂದ ಶೈಲಾಬಿ ಕಾಗವಾಡೆˌಅಕ್ಷಯ ಜಗದಾಳ ವರ್ಗ ಪ್ರತಿನಿಧಿಗಳಾಗಿ ಚುನಾಯಿತರಾಗಿದ್ದಾರೆಂದು ಉಸ್ತುವಾರಿ ಶಿಕ್ಷಕ ಎಸ್.ಎಸ್.ಕಾಂಬಳೆ ತಿಳಿಸಿದ್ದಾರೆ.


ಸಾವನಕುಮಾರ ಗಸ್ತಿˌಶ್ರೀಕಾಂತ ಹಳ್ಳೂರˌಮಹಾದೇವ ಕಳ್ಳಿಗುದ್ದಿˌ ಪಾರೀಸ ಬಳೋಜˌಸುಮಿತ್ರಾ ಮಗೆಣ್ಣವರ ˌಜ್ಯೋತಿ ಮಹಾಬಳಶೆಟ್ಟಿ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯರುˌಶಿಕ್ಷಕರು ˌವಿದ್ಯಾರ್ಥಿಗಳು ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!