ರಾಜ್ಯದಲ್ಲಿ ಬಿಜೆಪಿ ಪಕ್ಷ ನಾವಿಕನಿಲ್ಲದೆ ದೋಣಿ ಅಂತಾಗಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ

Share the Post Now

ಬೆಳಗಾವಿ :ರಾಜ್ಯದ ಪ್ರಮುಖ ಮತ್ತು ರಾಷ್ಟ್ರೀಯ ಪಕ್ಷ ಬಿಜೆಪಿಯ ಸ್ಥಿತಿ ಮನೆಯೊಂದು ಆರು ಬಾಗಿಲುಗಳಾಗುವ ಮೂಲಕ ಒಡೆದು ಛಿದ್ರವಾಗಿದೆ ಎಂದು ಮಾಜಿ ಡಿಸಿಎಮ್, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿ ಜಿಲ್ಲೇಯ ಅಥಣಿ ತಾಲೂಕಿನ ಹಲ್ಯಾಳದಲ್ಲಿ ಕರಿ ಮಸೂತಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಕೃಷ್ಣಾ ನದಿಯಿಂದ ನೀರು ಹರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಗೊಂಡು ಒಂದುವರೆ ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ರಾಜ್ಯದ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ.

ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಜೆಟ್ ಅಧಿವೇಶನದಂತಹ ಮಹತ್ವದ ಸಮಯದಲ್ಲಿಯೂ ಸಹ ವಿರೋಧ ಪಕ್ಷದ ನಾಯಕನ ಸ್ಥಾನ ತುಂಬಲು ಸಾಧ್ಯವಾಗಿಲ್ಲ ಆದರೂ ಬಿಜೆಪಿ ಮುಖಂಡರು ಮಾತ್ರ ಸಿಎಮ್ ಆಯ್ಕೆ ಕೆಲ ದಿನಗಳವರೆಗೆ ವಿಳಂಬವಾದಾಗ ಮಾತ್ರ ಮಾಧ್ಯಮಗಳೆದುರು ಅನವಶ್ಯಕ ಟೀಕೆಗಳನ್ನು ಮಾಡಿದ್ದರು ಎಂದ ಅವರು ರಾಜ್ಯ ಬಿಜೆಪಿ ಯಲ್ಲಿ ಗಟ್ಟಿ ನಾಯಕತ್ವ ಇಲ್ಲ ಹೀಗಾಗಿ ಯಾರ ಮೇಲೂ ಯಾರದೂ ಹಿಡಿತ ಇಲ್ಲದಂತಾಗಿದೆ ಎಂದರು.

ಕಡು ಬಡವರು, ಬಡವರು, ಮಧ್ಯಮ ವರ್ಗದ ವರು ಮತ್ತು ಶ್ರೀಮಂತರಿಗೂ ಅನಕೂಲವಾಗುವಂತೆ ಸಿಎಮ್ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡನೆ ಮಾಡಿದ್ದಾರೆ ಆದರೂ ಕೂಡ ವಿರೋಧ ಪಕ್ಷದ ಸದಸ್ಯರು ವಿನಾಕಾರಣ ಟೀಕೆಗಳನ್ನು ಮಾಡುತ್ತಿದ್ದು, ಇವರ ಟೀಕೆಗಳಿಗೆ ರಾಜ್ಯದ ಜನ ಮುಂದಿನ ದಿನಗಳಲ್ಲಿ ಛೀ ಮಾರಿ ಹಾಕಲಿದ್ದಾರೆ ಎಂದ ಅವರು ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದ ವಿರುದ್ಧ ಟೀಕೆಗಳನ್ನು ಮಾಡಬೇಕು ಆದರೆ ಟೀಕೆಗಳು ರಚನಾತ್ಮಕವಾಗಿರಬೇಕು ಎಂದು ಕಿವಿ ಮಾತು ಹೇಳಿದರು.

ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗಾಗಿ ಸುಮಾರು 19400 ಕೋಟಿ ಅನುದಾನ ಮೀಸಲಿಡಲಾಗಿದ್ದು, ಈ ಅನುದಾನ ಅಥಣಿ ಮತಕ್ಷೇತ್ರದ ನೀರಾವರಿ ಯೋಜನೆಗೂ ಅನಕೂಲವಾಗಲಿದೆ ಎಂದ ಅವರು ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಸಣ್ಣ, ಮಧ್ಯಮ ಹಾಗೂ ದೊಡ್ಡ ರೈತರಿಗೆ ಉಪಯೋಗವಾಗಲಿದೆ ಮತ್ತು ಈ ಬಜೆಟ್ ಸರ್ವರಿಗೂ ಸಮ ಪಾಲು, ಸಮ ಬಾಳು ಸಂದೇಶ ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ಧುರೀಣರಾದ ಚಿದಾನಂದ ಸವದಿ, ಎಸ್.ಕೆ.ಬುಟಾಳಿ, ಶಿವು ಗುಡ್ಡಾಪುರ, ಮಹಾಂತೇಶ ಠಕ್ಷಣ್ಣವರ,ನರಸು ಬಡಕಂಬಿ ಸುರೇಶ ಮಾಯಣ್ಣವರ, ಶಾಂತಿನಾಥ ನಂದೇಶ್ವರ, ಶಿವರುದ್ರ ಘೋಳಪ್ಪನವರ, ಮಹಾದೇವ ಬಸಗೌಡರ, ಲಕ್ಷ್ಮಣ ಮುಗಳಖೋಡ, ಅಶೋಕ ಕೌಜಲಗಿ, ಪುರಸಭಾ ಸದಸ್ಯರಾದ ರಾಜಶೇಖರ ಗುಡೊಡಗಿ, ಕಲ್ಲೇಶ ಮಡ್ಡಿ,ಆಶೀಪ ತಾಂಬೋಳಿ, ನೀರಾವರಿ ಇಲಾಖೆಯ ಕೆ.ರವಿ, ಪ್ರವೀಣ ಹುಣಸಿಕಟ್ಟಿ, ಬಸವರಾಜ ಗಲಗಲಿ, ಗುತ್ತಿಗೆದಾರ ವಿಕ್ರಮ ಭೋಸಲೆ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು…..

Leave a Comment

Your email address will not be published. Required fields are marked *

error: Content is protected !!