ಬೆಳಗಾವಿ.ರಾಯಬಾಗ:* ತಾಲ್ಲೂಕಿನ ಸುಕ್ಷೇತ್ರ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಅಧಿಕ ಮಾಸದ ನಿಮಿತ್ಯ ಶ್ರೀ ದೇವಿ ಮಹಾ ಮಹಾತ್ಮೆ ಪುರಾಣ ಪ್ರವಚನ ಆಯೋಜಿಸಲಾಗಿದೆ.ಶ್ರೀ ಗುರುದೇವ ಬ್ರಹ್ಮಾನಂದ ಮಹಾ ಶಿವಯೋಗಿಗಳವರ ದಿವ್ಯ ಆಶೀರ್ವಾದದಂತೆ, ಶ್ರೀ ಗುರುದೇವ ಸಿದ್ದೇಶ್ವರ ಮಹಾಸ್ವಾಮಿಗಳವರ ದಿವ್ಯ ಸಂಕಲ್ಪದಂತೆ, ಪರಮಪೂಜ್ಯರು ಯುವ ಯತಿವರ್ಯರಾದ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಅಧಿಕಮಾಸದ ನಿಮಿತ್ಯ “ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ” ಮಂಗಳವಾರ ದಿ.18 ರಿಂದ ಗುರುವಾರ ದಿನಾಂಕ 27 ರ ವರೆಗೆ ನಡೆಯಲಿದೆ.
ನಿತ್ಯ ಸಂಜೆ 6:30 ರಿಂದ 7 ರವರೆಗೆ ಸಾಮೂಹಿಕ ಪುರಾಣ ಪಾರಾಯಣ ನಂತರ 7 ರಿಂದ 9 ರವರೆಗೆ ಪುರಾಣ ಪ್ರವಚನ ಕಾರ್ಯಕ್ರಮ ಜರುಗುವುದು.
ಆಶ್ರಮದ ಪೀಠಾಧಿಪತಿಗಳಾದ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಂದಗಾಂವದ ಭೂಕೈಲಾಸ ಮಂದಿರದ ಪರಮಪೂಜ್ಯ ಸಮರ್ಥ ಸದ್ಗುರು ಶ್ರೀ ಮಹಾದೇವ ಮಹಾರಾಜರು ಪ್ರವಚನ ನೀಡಲು ದಯಮಾಡಿಸಲಿದ್ದಾರೆ.ಹಾಗೂ ಪ್ರತಿದಿನ ಸ್ಥಳೀಯ ಶ್ರೀ ಗುರು ಬ್ರಹ್ಮಾನಂದ ಭಜನಾ ಮಂಡಳಿಯ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದ್ದು, ಕಾರಣ ಸದ್ಭಕ್ತರು ತನು ಮನ ಧನದೊಂದಿಗೆ ಸೇವೆ ಸಲ್ಲಿಸಿ ಶ್ರೀ ದುರ್ಗಾಪರಮೇಶ್ವರಿಯ ಕೃಪೆಗೆ ಪಾತ್ರರಾಗಬೇಕೆಂದು ಆಶ್ರಮದ ಸದ್ಭಕ್ತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.
ವರದಿ:~ಡಾ.ಜಯವೀರ ಎ.ಕೆ*
*ಖೇಮಲಾಪುರ*.