ಸರಿಯಾಗಿ ತಲುಪದ ಕಾಲುವೆ ನೀರು, ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ.
ವರದಿ: ಸಂತೋಷ ಮುಗಳಿ
ಬೆಳಗಾವಿ.
ರಾಯಬಾಗ.ಮುಗಳಖೋಡ : ಪಟ್ಟಣ ಸೆರಿದಂತೆ ಪಾಲಬಾವಿ, ಸುಲ್ತಾನಪುರ, ಹಂದಿಗುoದ, ಬಸ್ತವಾಡ, ನಿಡಗುಂದಿ, ಮರಾಕುಡಿ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಘಟಪ್ರಭಾ ಎಡದಂಡೆ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ಜನ ರೈತ ಸಂಘದ ಮುಖಂಡರು ಮುಗಳಖೋಡ ಕ್ರಾಸ್ ಬಳಿ ಜತ್ತ- ಜಾoಬೊಟಿ ರಸ್ತೆಯನ್ನು ತಡೆಹಿಡಿದು ಟಾಯರ್ಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ದೌಡಾಯಿಸಿದ ಹಾರೂಗೇರಿಯ ಪೊಲೀಸ್ ಠಾಣಾಧಿಕಾರಿ ಗಿರಮಲೣಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳು ಪ್ರತಿಭಟನಾ ನಿರತ ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರು ಪಟ್ಟು ಬಿಡದ ರೈತರು ಪ್ರತಿಭಟನೆ ಹಿಂಪಡೆಯದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಾಲ್ಕೈದು ಹಳ್ಳಿಗಳ ರೈತ ಸಂಘದ ಮುಖಂಡರು, ರೈತರು ಭಾಗಿಯಾಗಿದ್ದರಿoದ ಹಾರೂಗೇರಿಯ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ ಹಾಗೂ ಠಾಣಾಧಿಕಾರಿ ಗಿರಮಲಪ್ಪ ಉಪ್ಪಾರ ಸೂಕ್ತ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ನಂತರ ಘಟಪ್ರಭಾ ಎಡದಂಡೆ ಕಾಲುವೆಯ ನೀರು ಕಳ್ಳತನಕ್ಕೆ ಹಾಕಿರುವ ತಡೆಗೋಡೆ ಹಾಗೂ ಮೋಟಾರಗಳನ್ನು ಕಿತ್ತು ಹಾಕಿ ಮುಂದಿನ ಹಳ್ಳಿಗಳಿಗೆ ನೀರು ಸರಾಗವಾಗಿ ಹೋಗುವಂತೆ ಮಾಡಿದರು.
ಈ ಸಂದರ್ಭದಲ್ಲಿ ರಾಯಬಾಗ ತಾಲೂಕು ಹಸಿರು ಸೇನೆ ಹಾಗೂ ರೈತ ಸಂಘದ ತಾಲೂಕಾಧ್ಯಕ್ಷ ಮಲ್ಲಪ್ಪ ಅಂಗಡಿ, ರಮೇಶ ಕಲ್ಲಾರ, ಸುರೇಶ ಹೊಸಪೇಟಿ, ಜ್ಞಾನದೇವ ಅಳಗೋಡಿ, ಅಶೋಕ ಗಸ್ತಿ, ಬಾಬುಗೌಡ ಪಾಟೀಲ, ಮಾಯಪ್ಪ ಲೋಕೂರ, ಮಾಹಾದೇವ ಹೋಲ್ಕರ, ಮಲ್ಲಿಕಾರ್ಜುನ ಖಾನಗೌಡ, ಶ್ರೀಮಂತ ಪೂಜೇರಿ, ಶ್ರೀಶೈಲ ತೇಲಿ, ಕರೆಪ್ಪ ಹಾರೂಗೇರಿ ಸೇರಿದಂತೆ ಅಪಾರ ರೈತ ಮುಖಂಡರು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.





