ರಸಪ್ರಶ್ನೆ ಸ್ಪರ್ಧೆ ವಿದ್ಯಾರ್ಥಿಗಳನ್ನು ಜಗತ್ತಿನಲ್ಲಿ ಜಯಶೀಲರನ್ನಾಗಿಸುತ್ತದೆ:ಸಂತೋಷ ತಮದಡ್ಡಿ

Share the Post Now

ಬೆಳಗಾವಿ.ರಾಯಬಾಗ:ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಓದುವ ಹಂಬಲ ಹೆಚ್ಚಿಸಿ ಸ್ಪರ್ಧಾ ಜಗತ್ತಿನಲ್ಲಿ ಜಯಶೀಲರನ್ನಾಗಿಸುತ್ತದೆಯೆಂದು ಗಣಿತ ಪ್ರಾಧ್ಯಾಪಕˌಜ್ಞಾನೋಪಾಸಕ ಸಂತೋಷ ತಮದಡ್ಡಿ ಹೇಳಿದರು.


ಅವರು ಪಕ್ಕದ ಅಥಣಿ ತಾಲ್ಲೂಕಿನ ಕಡೆಯ ಗ್ರಾಮ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡದ ಕೊಟ್ಯಾಧಿಪತಿ ಮಾದರಿಯಲ್ಲಿ ಇತ್ತೀಚೆಗೆ ಆಯೋಜಿಸಿದ ರಸಪ್ರಶ್ನೆ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡು ಮಾತನಾಡಿದರು. ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳು ಪುಸ್ತಕಗಳ ಗೆಳೆತನ ಬೆಳೆಸಿಕೊಳ್ಳುವಂತೆ ಮಾಡಿ ಜ್ಞಾನ ಚಕ್ರವರ್ತಿಗಳನ್ನಾಗಿಸುತ್ತದೆಯೆಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಮಾತನಾಡಿ “ಮಕ್ಕಳ ಮೆದುಳಿನಲ್ಲಿ ಜ್ಞಾನದ ನವ ಬೆಳದಿಂಗಳನ್ನು ಹರಡಿ ಮಾನಸ ಸರೋವರದಲ್ಲಿ ಸಂತಸದ ತರಂಗಗಳನ್ನು ಪಸರಿಸಿದ ಸೇವಾಭಾವದ ಸಂತೋಷ ತಮದಡ್ಡಿ ಅವರಿಗೆ ಧನ್ಯವಾದ ಅರ್ಪಿಸಿದರು.


ಸಾವನಕುಮಾರ ಗಸ್ತಿˌ ,ಶಂಕರ ಕಾಂಬಳೆˌಶ್ರೀಕಾಂತ ಹಳ್ಳೂರˌಮಹಾದೇವ ಕಳ್ಳಿಗುದ್ದಿ,ˌಸುಮಿತ್ರಾ ಮಗೆಣ್ಣವರ,ˌಪಾರೀಸ ಬಳೋಜˌಜ್ಯೋತಿ ಮಹಾಬಳಶೆಟ್ಟಿˌ,ಶಮೀರ ಸನದಿ,ˌಲಕ್ಷ್ಮೀ ಮಗದುಮ್ಮ, ಉಪಸ್ಥಿತರಿದ್ದರು.
ಲಿಖಿತ ಪರೀಕ್ಷೆ ಬರೆದ ಇಪ್ಪತ್ತೆಂಟು ತಂಡಗಳಲ್ಲಿ ಎಂಟು ತಂಡಗಳು ಮೌಖಿಕ ಹನ್ನೆರಡು ಸುತ್ತುಗಳ ರಸಪ್ರಶ್ನೆ ಸ್ಪರ್ಧೆ ಎದುರಿಸಿ ರಸರೋಮಾಂಚನಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.


ಮೊದಲ ಮೂರು ಸ್ಥಾನಗಳನ್ನು ಗಿಟ್ಟಿಸಿದ ತಂಡಗಳಿಗೆ ಪುಸ್ತಕ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.ಐದು ತಂಡಗಳಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕಗಳನ್ನು ವಿದ್ಯಾರ್ಥಿಗಳ ಕೈಗಿತ್ತು ಪ್ರೋತ್ಸಾಹಿಸಿದ್ದು ಅವರ ಮುಖಕಮಲಗಳನ್ನು ಅರಳುವಂತೆ ಮಾಡಿತು.ಕಾರ್ಯಕ್ರಮದಲ್ಲಿ ಪ್ರೇಕ್ಷಕ ವಿದ್ಯಾರ್ಥಿಗಳಿಗೆ ಎರಡು ಸುತ್ತಿಗೊಮ್ಮೆ ಒಂದೊಂದು ಪ್ರಶ್ನೆ ಕೇಳಿ ಉತ್ತರ ಪಡೆದು ಅವಧಾನˌ ಆಸಕ್ತಿ ಕರಗದಂತೆ ನೋಡಿಕೊಂಡದ್ದು ಢಾಳಾಗಿ ಗೋಚರಿಸಿತು.
ವಿಷಯ ಶಿಕ್ಷಕರು ಪ್ರಶ್ನೆಗಳನ್ನು ಬಿತ್ತರಿಸಿದರು.ವಿದ್ಯಾರ್ಥಿಗಳು ಜ್ಞಾನರಸ ಹೀರಿದರು.ಸಂತೋಷ ತಮದಡ್ಡಿ ಕಾರ್ಯಕ್ರಮ ಗೆಲ್ಲಿಸಿದರು.ಕಾರ್ಯಕ್ರಮ ಸಂಪನ್ನಗೊಂಡಿತು.

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!