ವರದಿ: ರಾಶಿದ್ ಶೇಖ ಅಥಣಿ
ಬಸ್ ನಲ್ಲಿ ಕುಳಿತುಕೊಳ್ಳಲು ಜಾಗ ಇಲ್ಲದೇ ಬೇಸತ್ತ ಹೋದ ಶಾಲಾ ಕಾಲೇಜು ವಿದ್ಯಾರ್ಥಿಗಳು;
ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಘೋಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ.
ಬೆಳ್ಳೆಗೆ ಶಾಲೆಗೆ ಬರುಮುಂದೆ ಹಾಗೂ ಸಾಯಂಕಾಲ ಶಾಲೆ ಬಿಟ್ಟು ಹೋಗು ಮುಂದೆ ದಿನ ದಿನ ವಿದ್ಯಾರ್ಥಿಗಳಿಗೆ ಕಷ್ಟ ವಾಗುತದ್ದೆ ವಿದ್ಯಾರ್ಥಿಗಳಿಗೆ ಇದೇ ಪರಿಸ್ಥಿತಿ ಮುಂದು ವರಿದರೆ ಅನಾಹುತ ಆಗುದ್ದು ಖಚಿತ ಎಂದು ಕೊಕಟನೂರು ಗ್ರಾಮಸ್ತರು ಹೇಳಿದ್ರು.
ಬಹುತೇಕ ಬಸ್‌ಗಳು ತುಂಬಿ ಬರುತ್ತಿದ್ದು, ವಿದ್ಯಾರ್ಥಿಗಳು ಬಾಗಿಲಲ್ಲೇ ನಿಂತು, ಜೋತು ಬಿದ್ದು ಪ್ರಯಾಣ ಮಾಡುವ ಅನಿವಾರ್ಯ ಎದುರಾಗಿದೆ.
ಅಷ್ಟೇ ಅಲ್ಲ, ಹಲವೆಡೆ ಗ್ರಾಮಾಂತರ ಪ್ರದೇಶದಲ್ಲಿ ಬಸ್ ಕೊರತೆ ಸಹ ಬಹುವಾಗಿ ಕಾಡುತ್ತಿದೆ.
ವಿದ್ಯಾರ್ಥಿಗಳು ಪ್ರಾಣ ಪಣಕ್ಕಿಟ್ಟು ಬಸ್ ಏರುವಂತಾಗಿದೆ.
ವಿದ್ಯಾರ್ಥಿಗಳಿಗೆ ಮೊದಲಿನಿಂದಲೂ ಇಂತಹ ಸಮಸ್ಯೆ ಇತ್ತು. ಈಗ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾದ ಬಳಿಕ ಮತ್ತಷ್ಟುಹೆಚ್ಚಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ : ಈಗ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬಸ್!
ಸರಿಯಾದ ವೇಳೆಗೆ ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ತೆರಳಬೇಕು..
ಆದರೆ ಸ್ಪಂದನೆ ಸಿಗುತ್ತಿಲ್ಲ. ಈಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಬಸ್‌ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.
ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಕೆಲವೆಡೆ ಬಸ್ ಹತ್ತಲು ಅವಕಾಶವೇ ಸಿಗುತ್ತಿಲ್ಲ.
ಬಸ್‌ಗಳ ಕೊರತೆಯಿಂದ ಸರಿಯಾದ ವೇಳೆಗೆ ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ತಲುಪಲು ಸಾಧ್ಯವಾಗುತ್ತಿಲ್ಲ.
ತಡವಾಗಿ ಹೋಗುವುದರಿಂದ ತರಗತಿಗಳು ಆಗಲೇ ಆರಂಭವಾಗಿ ಬಿಟ್ಟಿರುತ್ತವೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹ ಹಿನ್ನಡೆ ಆಗುತ್ತಿದೆ





