ನಾಳೆ ಮುಗಳಖೋಡ ಸಾಯಿಬಾಬರ 11ನೇ ವಾರ್ಷಿಕೋತ್ಸವ.

Share the Post Now

ವರದಿ: ಸಂಗಮೇಶ ಹಿರೇಮಠ.

ರಾಯಬಾಗ.ಮುಗಳಖೋಡ: ಪಟ್ಟಣದ ಚವಿವ ಸಂಘದ ಆವರಣದಲ್ಲಿ ಸ್ಥಾಪಿಸಿದ ಶ್ರೀ ಸಾಯಿಬಾಬಾರ ಮೂರ್ತಿ ಪ್ರತಿಷ್ಠಾಪನದ 11ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ಯ ಪಟ್ಟಣದಲ್ಲಿ ಬಾಬಾರ ಮೆರವಣಿಗೆ, ಶಾಲಾ ಸಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಕುಡಚಿ ಕ್ಷೇತ್ರದ ನೂತನ ಶಾಸಕರಾದ ಮಹೇಂದ್ರ ತಮ್ಮಣ್ಣವರ ದಂಪತಿಗಳಿಗೆ ಹಾಗೂ ಪ್ರಮುಖರಿಗೆ ಸನ್ಮಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಚಲೇರಿ-ಜಿಡಗಾ ಮಠದ ಪೀಠಾಧಿಪತಿಗಳಾದ ಪ.ಪೂ. ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಲಿಗೋಡ, ಉದ್ಘಾಟಕರಾಗಿ ಕುಡಚಿ ಮತಕ್ಷೇತ್ರದ ನೂತನ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ, ಅತಿಥಿಗಳಾಗಿ ಗಿರಿಗೌಡ ಪಾಟೀಲ್, ಪ್ರಕಾಶ್ ಆದಪ್ಪಗೋಳ ಆಗಮಿಸಲಿದ್ದಾರೆ.

24 ರಂದು ಸೋಮವಾರ ಮುಂಜಾನೆ 9:30 ಗಂಟೆಗೆ ಸಾಯಿಬಾಬಾರ ಭವ್ಯ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಜಾಂಜಪತಾಕ, ಕರಡಿಮೇಳ, ಡೊಳ್ಳು ಕುಣಿತ, ಕುದುರೆ ಸೊಂಗ, ಸೇರಿದಂತೆ ಸುಮಾರು ಸಾವಿರ ಸಾವಿರ ಆರತಿ ಕುಂಭವನ್ನು ಹೊತ್ತ ಮಹಿಳೆಯರು, ಹಾಗೂ ಪಟ್ಟಣದ ಗ್ರಾಮಸ್ಥರು, ಶಾಲಾ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಚವಿವ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಸಿ. ಬಿ. ಕುಲಿಗೋಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!