ಒಲೆ ರಹಿತ ಅಡುಗೆ, ನೂರಾರು ವಿದ್ಯಾರ್ಥಿಗಳು ಭಾಗಿ, ಬಗೆಬಗೆಯ ಅಹಾರ, ಪ್ರೇಕ್ಷಕರ ಕಣ್ಮನ ಸೆಳೆದ ಕಾರ್ಯಕ್ರಮ.
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಈಗಿನ ಮಹಿಳೆಯರು ‘ನನಗೆ ಅಡುಗೆ ಅಂದ್ರೆ ಆಗಲ್ಲ’ ಅಂತ ಹೇಳೋದೇ ಫ್ಯಾಷನ್. ಗಂಡನ ಕೈಲಿ ಅಡುಗೆ, ಮನೆ ಕೆಲಸ ಮಾಡ್ಸಿದ್ರೆ ಇವರಿಗೆ ಒಂಥರಾ ಸಂತೋಷ. ನಮ್ಮ ಭಾರತೀಯ ಮಹಿಳೆಯರ ಕೈರುಚಿ ತುಂಬಾ ವಿಶೇಷವಾದದ್ದು ಟಿವಿ ಮೊಬೈಲ್ ನೋಡಿ ಅಡುಗೆ ಮಾಡುವ ಇವತ್ತಿನ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಅಡುಗೆ ಕಲಿಯುವುದು ತುಂಬಾ ಅವಶ್ಯಕವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಡಾ. ಸಿ. ಬಿ. ಕುಲಿಗೋಡ ಹೇಳಿದರು.
ಅವರು ಪಟ್ಟಣದ ಚವಿವ ಸಂಘದ ಡಾ.ಸಿ.ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಹಮ್ಮಿಕೊಂಡ ಒಲೆ ರಹಿತ ಅಹಾರ ತಯಾರಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ರೀತಿಯ ಅಡುಗೆ ತಯಾರಿಸಲು ಕಲಿತುಕೊಳ್ಳಿ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಕಾಲೇಜಿನ 12 ಟಿಮ್ ಗಳು, ಸುಮಾರು 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿ ನಾನಾ ರೀತಿಯ ತರಕಾರಿ, ಹಣ್ಣು, ಚುರುಮುರಿ, ಮೊಸರು ಅವಲಕ್ಕಿ, ಕೋಕನಟ್ ಬರ್ಫಿ, ಚಾಕೋಲೆಟ್ ಮೊದಕ, ಫ್ರೂಟ್ ಸಲಾಡ್, ಕ್ಯಾರೆಟ್ ಮತ್ತು ಲೆಮನ್ ಜ್ಯೂಸಿ ಸೇರಿದಂತೆ ಮಜ್ಜಿಗೆ, ಗುಲಾಬಿ ಜ್ಯೂಸ್, ಶರಬತ್ ಹೀಗೆ ನಾನಾ ರೀತಿ ಆಹಾರ ತಯಾರಿಸಿ ನೋಡುಗರ ಗಮನ ಸೆಳೆಯುವಂತೆ ಒಲೆ ರಹಿತ ಆಹಾರ ತಯಾರಿಕೆ ಸ್ಪರ್ಧೆಯಲ್ಲಿ ಭಾಗಿಯಾದರು.
ಸ್ವ ಕಾಲೇಜಿನ ಪ್ರಾಧ್ಯಾಪಕರು ತೀರ್ಪು ನೀಡಬಾರದೆಂದು ಪ್ರೇಕ್ಷಕ ವರ್ಗದಿಂದ ಹಾಗೂ ಅನ್ಯ ಶಾಲೆ-ಕಾಲೇಜುಗಳ ಶಿಕ್ಷಕರನ್ನು ಕರೆಸಿ, ರುಚಿಯ ನೋಡಿ ತೀರ್ಪು ನೀಡಲು ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಪ್ರೇಕ್ಷಕರು ವೇದಿಕೆ ಹತ್ತಿ ತಮ್ಮ ಹಾಸ್ಯ ಪ್ರಜ್ಞೆಯನ್ನು ಹೊರ ಹಾಕಿ ಜನರನ್ನು ರಂಜಿಸಿದರು.
ನಿರ್ಣಾಯಕರಾಗಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ಕೆ. ಬೀಳಗಿ, ಪ್ರೌಢಶಾಲಾ ವಿಭಾಗದ ಪ್ರಾಚಾರ್ಯರಾದ ಎಸ್. ಎಸ್. ಮದಾಳೆ, ಆರ್.ಜಿ. ಮೊಗವೀರ, ಎಲ್. ಎಂ. ಬೇವನುರ, ಶ್ರೀಮತಿ ಎಸ್ ಬಿ ಕೊಕಟನೂರ, ಅರ್.ಜಿ. ಹುಬ್ಬಳ್ಳಿ ಆಗಮಿಸಿ ಪ್ರಥಮ ಸ್ಥಾನವನ್ನ ‘ತಿನಿಸು ಮಳಿಗೆ’ ತಂಡ, ದ್ವಿತೀಯ ಸ್ಥಾನ ‘ನವಗ್ರಹ ತಂಡ’, ತೃತೀಯ ಸ್ಥಾನ ‘ಶ್ರೀ ಸಾಯಿ ಪುಡ್ಡ್ ಸೆಂಟರ್’ ಮತ್ತು ‘ಬ್ಯಾಚುಲರ್ ಬೇಕರಿ’ ತಂಡದವರು ಪಡೆದುಕೊಂಡರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಪಿ. ಸಿ. ಕಂಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಈ ಸಂದರ್ಭದಲ್ಲಿ ಸಾಂಸ್ಕತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ, ಗುರುಪಾದ ಜಂಬಗಿ, ರೆಡ್ ಕ್ರಾಸ್ ಘಟಕದ ಮುಖ್ಯಸ್ಥ ಪ್ರದೀಪ್ ಎ.ಎನ್, ಡಾ. ಪಿ. ಬಿ. ಕೊರವಿ, ಬಿ.ಎಸ್. ಸವಸುದ್ದಿ, ಆರ್. ಎಸ್. ಶೇಗುಣಸಿ, ಎಚ್. ಎಂ. ಕಂಕಣವಾಡಿ, ಕೆ.ಪಿ. ಹಾಲಳ್ಳಿ, ಗ್ರಂಥಪಾಲಕ ಸಂಗಣ್ಣ ತೇಲಿ, ಕುಮಾರಿ ಆರ್.ಎಂ. ಖೇತಗೌಡರ, ಹುಸೇನ್ ಯಲಿಗಾರ, ಬಸು ಸಣ್ಣಕ್ಕಿ ಸೇರಿದಂತೆ ಪದವಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.