ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಈ ಮದುವೆ ನಡೆದಿದೆ. ಚಿಕ್ಕಬಳ್ಳಾಫುರ ತಾಲೂಕಿನ ಚಿಕ್ಕಕಿರುಗುಂಬಿ ಯುವಕ ಚೇತನ್ ಹಾಗೂ ಅದೇ ತಾಲೂಕಿನ ಇಟಪನಹಳ್ಳಿ ನಿವಾಸಿ ಯುವತಿಯ ಮಧ್ಯೆ ಈ ಮದುವೆ ನಡೆದಿದೆ.
ಯುವತಿಯ ಮನೆಯವರು ಹಾಗೂ ಕೆಲವು ಸಂಘ-ಸಂಘಟನೆಗಳವರು ಜೊತೆಯಾಗಿ ಬಲವಂತವಾಗಿ ಈ ಮದುವೆ ಮಾಡಿಸಿದ್ದು, ಮದುವೆಗೂ ಮುನ್ನ ವರನಿಗೆ ವಧುವಿನಿಂದ ಹೊಡೆಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿಯಿದ್ದು, ವಧು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಆಗ ಯುವಕ ಮದುವೆಗೆ ನಿರಾಕರಿಸಿದ್ದರಿಂದ ಈ ರೀತಿಯಲ್ಲಿ ಮದುವೆ ಮಾಡಿಸಲಾಗಿದೆ