ಬೆಳಗಾವಿ :ರಾಜ್ಯದಲ್ಲಿ ಹಾಗೂ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಭೀಮ್ ಸೇನಾ ಬ್ರಹತ್ ಪ್ರತಿಭಟನಾ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೂಲಿ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗದ ಹೆಣ್ಣು ಮಕ್ಕಳನ್ನು (ಪ್ರೀತಿ ಹೆಸರಿನಲ್ಲಿ ಮೋಸ ಮಾಡಿ) ನಮ್ಮ ಮನೆಯಲ್ಲಿ ಜಾತಿ ಸಮಸ್ಯೆ ಎಂದು ಅವರನ್ನು ಉಪಯೋಗಿಸಿ ಬಿಟ್ಟು ಹೋಗಿರುತ್ತಾರೆ. ಅಲ್ಲದೆ ಇನ್ನು ಹೀನಾಯವಾಗಿ ನೀಚ ಕೃತ್ಯಗಳನ್ನು ಎಸಗಿರುವುದು ಈಗಾಗಲೇ ತಮ್ಮೆಲ್ಲರ ಗಮನದಲ್ಲಿ ಇದೆ. ಮೊನ್ನೆ ಅಷ್ಟೇ ರಾಜ್ಯದಲ್ಲಿ ಮೂರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹಾಡಿ ಕೊಲೆ ಮಾಡಲಾಗಿದೆ. ಹಾಗೂ
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಲಾಗಿದೆ
– ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ನಾರ್ಥ ಅಮೇರಿಕನ್ ಮಣಿಮರ ಟ್ರೈಬಲ್ ಅಸೋಸಿಯೇಷನ್’ ಎಂಬ
ಸಂಸ್ಥೆಯು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಜೂನ್ 12 ರಂದು ನೀಡಿತ್ತು ಆದರೆ ಮಹಿಳಾ ಆಯೋಗವು ದೂರು ತಲುಪಿದ 38
ದಿನಗಳ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ, ವಿಡಿಯೋ ಬಹಿರಂಗವಾದ ಬಳಿಕವಷ್ಟೇ ಕ್ರಮಕೈಗೊಳ್ಳುವುದಕ್ಕೆ, ಈ ವಿಚಾರವಾಗಿ
ಈ ಘಟನೆಗಳ ವಿರುದ್ಧವಾಗಿ ದೇಶ ಹಾಗೂ ರಾಜ್ಯದ ಹೆಣ್ಣ ಮಕ್ಕಳ ಮೇಲಿನ ಈ ದೌರ್ಜನ್ಯ ವಿರುದ್ಧವಾಗಿ,
ನಮ್ಮ ಕರ್ನಾಟಕ ಭೀಮ್ ಸೇನೆ (ರಿ) ಸಂಘಟನೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಈ ದಿನಾಂಕ: 25-07-2023 ರಂದು ಬೃಹತ್ ಪ್ರತಿಭಟನಾ ಹೋರಾಟ ಮಾಡುವ ಮೂಲಕ ಈ ದೂರನ್ನು ನೀಡಿರುತ್ತೇವೆ. ತಾವುಗಳು ನಮ್ಮ ದೂರನ್ನು ಹಾಗೂ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆ ಯಾಗುವ ಹಾಗೆ ಮತ್ತು ಇಷ್ಟೆಲ್ಲಾ ಕೃತ್ಯ ನಡೆದರು. ಕಣ್ಣು ಕಾಣದ ಹಾಗೆ ಮೂಕರಂತ ಇರುವ ರಾಜಕಾರಣಿಗಳು ರಾಜ್ಯದ ಹಾಗೂ ದೇಶದ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದಿರುವ ರಾಜಕಾರಣಿಗಳು, ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುವಂತೆ ಎಚ್ಚರಿಕೆ ನೀಡಬೇಕಾಗಿ ಗೌರವಾನ್ವಿತ ರಾಜ್ಯಪಾಲದಲ್ಲಿ ಕರ್ನಾಟಕ ಭೀಮ್ ಸೇನೆ (ರಿ) ಸಂಘಟನೆ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಂಡರು





