ಹಳ್ಳೂರ . ಗ್ರಾಮ ಪಂಚಾಯಿತ ಹಳ್ಳೂರ 2 ಎರಡನೇ ಅವಧಿಗಾಗಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ನೀಲವ್ವ ಮಲ್ಲಪ್ಪ ಹೊಸಟ್ಟಿ.ಉಪಾಧ್ಯಕ್ಷರಾಗಿ ಜಯಶ್ರೀ ಮಿರ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 25 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಹಿಂದುಳಿದ ಅ ವರ್ಗ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ವರ್ಗ ಮೀಸಲಾಗಿತ್ತು.
ಗ್ರಾಮ ಪಂಚಾಯತಿಗೆ 2 ಎರಡನೆ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿ ಚುನಾಯಿತರಾಗಿರುವ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರನ್ನು ಒಳಗೊಂಡು ಉತ್ತಮ ರೀತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾರೆಂಬ ವಿಸ್ವಾಸವಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತ ಪಡಿಸಿದರು. ಚುನಾವಣಾಧಿಕಾರಿ ಅಜಿತ ಮನ್ನಿಕೇರಿ. ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ರಂಗಪ್ಪ ಗುಜನಟ್ಟಿ. ಸೇರಿದಂತೆ ಸಿಬ್ಬಂದಿಗಳು ಸದಸ್ಯರು ಗ್ರಾಮದ ಪ್ರಮುಖರಿದ್ದರು. ಕಾರ್ಯಕರ್ತರು, ಬೆಂಬಲಿಗರು ಸನ್ಮಾನ ನೇರವೇರಿಸಿ ಸಿಹಿ ಹಂಚಿ ವಿಜಯೋತ್ಸವನ್ನು ಆಚರಿಸಿದರು.





