ಬೆಳಗಾವಿ
ಅಥಣಿ – ಸಮೀಪದ ರಡ್ಡೇರಹಟ್ಟಿ ಗ್ರಾಮ ಪಂಚಾಯತಿ 2ನೇ ಅವಧಿಗೆ ಅಧ್ಯಕ್ಷರಾಗಿ ಶ್ರೀಮತಿ ಸುವರ್ಣ ಶಿ ಮಡಿವಾಳ ಉಪಾಧ್ಯಕ್ಷರಾಗಿ ಶ್ರೀಮತಿ ದೇವಕ್ಕ ಬ ಮಾದರ ಗುರುವಾರ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹುಂಡೇಕಾರ ಘೋಷಿಸಿದರು.
ನಂತರ ಯಾವುದೇ ಪಕ್ಷಪಾತ ಇಲ್ಲದೆ ಎರಡು ಪಕ್ಷದ ಕಾರ್ಯಕರ್ತರು ಸೇರಿ ಗುಲಾಲ್ ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಸವ್ವ ನಾಯಿಕ ಪಿ ಡಿ ಓ ಇರಪ್ಪ ತಮದಡ್ಡಿ, ಪಿ ಎಸ್ ಐ ಚಂದ್ರಶೇಖರ್ ಸಾಗನೂರ ಎಸ್ ಬಿ ಅವಟಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಹುಲ್ಯಾಳ ಗುರುಬಸು ಖೋತ ಪಾಂಡು ಭೋಪ್ಲೆ ಬಸವ್ವಾ ನಾಯಿಕ ಹಾಗೂ ಇತರ ಸದಸ್ಯರು ಹಿರಿಯರಾದ ಶಿವಾನಂದ ಗಲಗಲಿ ಬಾಹುಬಲಿ ದಾದಪಗೋಳ ಭಾರತಿ ಗಸ್ತಿ ಪಲ್ಲವಿ ಗಲಗಲಿ ವಿದ್ಯಾ ನಡುವಿನಮನಿ ಭರಮು ಅಲಗೂರ ಮಾಲಾ ಖೋತ ಬಾಬು ಬೋಸಲೆ ಊರಿನ ಹಿರಿಯರ ಬಸಪ್ಪಾ ನಾಗಪ್ಪ ಖೋತ ಶಿವಾನಂದ ಗಲಗಲಿ ಅಣ್ಣಪ್ಪ ಕಿತ್ತೂರು ಉಪಸ್ಥಿತರಿದ್ದರು