ಹಳ್ಳೂರ . ಹಿಂದೂ ಮುಸ್ಲಿಂ ಬಾವೈಕ್ಯತೆಯ ಮೊಹರಂ ಹಬ್ಬವು ಶನಿವಾರ ಕೊನೆಯ ದಿನದಂದು ಪಿರಸಾಭ ದರ್ಗಾ ದಿಂದ ಹಸೇನ ಹುಸೇನ ದೇವರ ಡೋಲಿಯ ಉತ್ಸವವನ್ನು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದವರೆಗೆ ಕರಬಲ ಕಾಳಗ, ರೇಜಿಯಂ ಆಟ ಹೆಜ್ಜೆ ಕುಣಿತ, ಅಲಾಯಿ ಕುಣಿತ ಮೊಹರಂ ಪದಗಳನ್ನು ಹಾಡುವುದು ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಅತೀ ವಿಜೃಂಭಣೆಯಿಂದ ಜರುಗಿತು.ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಸರ್ವ ಧರ್ಮಿಯರು ತಾರತಮ್ಯವಿಲ್ಲದೆ ಪಾಲ್ಗೊಂಡು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.ಡೋಲಿಯ ಮೇಲೆ ಬಕ್ತರು ಹರಕೆ ತೀರಿಸಲು ಬೆಂಡು ಬೇತ್ತಾಸು ಕಾರಿಕು ಹಾರಿಸಿ ಹರಕೆ ತೀರಿಸಿದರು. ನಂತರ ದೇವರನ್ನು ಹಿಂದಿನ ಪದ್ಧತಿಯಂತೆ ನದಿಗೆ ಕಳುಹಿಸಿಕೊಟ್ಟರು.