ಬೆಳಗಾವಿ : ಬಡತನದಲ್ಲಿ ಜೀವನ ನಡೆಸುತ್ತಾ ದಿನಸಿ ಅಂಗಡಿ ಇಟ್ಟುಕೊಂಡು ಸಂಸಾರ ಬಂಡಿ ಸಾಗಿಸುತ್ತಿದ್ದ ಗಣಪತಿ ಎಂಬುವವರ ಪುತ್ರ ಅಭಿಷೇಕ್ ಎಂಬ ವಿದ್ಯಾರ್ಥಿ 7 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದಲ್ಲಿ ಜನಿಸಿದ್ದ ವಿದ್ಯಾರ್ಥಿ ಅಭಿಷೇಕ್ ಜಿ. ಎಂಬುವವರ ತಂದೆ ಅದೇ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು.
ಬೆಂಗಳೂರಿನ ಕಾಲೇಜಿನದಲ್ಲಿ ಓದಿತ್ತಿದ್ದ ಇವರು ಮನೆಯಿಂದ ಬಸ್ ನಲ್ಲೇ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆದರೆ ಬಡತದಲ್ಲೇ ಉತ್ತಮವಾಗಿ ಓದಿ ವಿಶಿಷ್ಟ ಸಾಧನೆಗೈದಿದ್ದಾನೆ ಯುವಕ ಅಭಿಷೇಕ್.
ಅತೀ ಹೆಚ್ಚು 13 ಚಿನ್ನದ ಪದಕ ಪಡೆದ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ವಿದ್ಯಾರ್ಥಿ ಮದಕಶಿರಾ ಚಿನ್ಮಯ ವಿಕಾಸ ಹಾಗೂ ತಲಾ 7 ಚಿನ್ನದ ಪದಕ ಪಡೆದ ಬೆಂಗಳೂರಿನ ಬಿಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಭಿಷೇಕ. ಜಿ ಅವರಿಗೆ ಸನ್ಮಾನಿಸಲಾಯಿತು.
ಬೆಂಗಳೂರಿನ ಸರ್ ಎಂವಿಐಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಗುಡಿಕಲ್ ಸಾಯಿ ವಂಶಿ, ಬಳ್ಳಾರಿಯ ಬಿಐಟಿಎಂ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಕೆ.ಆರ್. ಸಂಪತ್ ಕುಮಾರ ಸೇರಿದಂತೆ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಿಗೆ ಪದಕ ವಿತರಿಸಲಾಯಿತು. ಇದೇ ವೇಳೆ 42,545 ಎಂಜಿನಿಯರಿಂಗ್, 1003 ಬಿಆರ್ಕ್, 584 ಪಿಎಚ್‍ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಕುಲಸಚಿವರಾದ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಟಿ.ಎನ್ ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ. ಎ ಸ್ವಪ್ನ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.