ಬೆಳಗಾವಿ : ಜಿಲ್ಲೆಯ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಜಿಲ್ಲೆಯಾದ್ಯಂತ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು, ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಸವರಾಜ್ ಅರವಳ್ಳಿ ಅವರ ವಿನೂತನ ಯೋಜನೆಗಳಿಂದ ಸಂಘ ಯಾವತ್ತೂ ಕ್ರಿಯಾಶೀಲವಾಗಿರುತ್ತದೆ..
ಅದೇ ರೀತಿ ಇಂದು ಬುಧವಾರ ನಗರದ ಸಮಾಜ ಕಲ್ಯಾಣ ಇಲಾಖೆಗೆ ಜಂಟಿ ನಿರ್ದೇಶಕರಾಗಿ ನೇಮಕವಾಗಿ ಅಧಿಕಾರ ವಹಿಸಿಕೊಂಡ ಲಕ್ಷ್ಮಣ ಬಬಲಿ ಅವರಿಗೆ ಸಂಘಟನೆಯ ವತಿಯಿಂದ ಪದಾಧಿಕಾರಿಗಳೆಲ್ಲರೂ ಸೇರಿ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು..
ಬಸವರಾಜ್ ಅರವಳ್ಳಿ ಮತ್ತು ಅವರ ತಂಡ ಜಿಲ್ಲೆಯಲ್ಲಿ ಹಲವಾರು ಪ್ರಗತಿಪರ ಕಾರ್ಯ ಮಾಡುತ್ತಿದ್ದು, ಎಲ್ಲರೊಂದಿಗೆ ಉತ್ತಮ ಸ್ನೇಹ ಸಂಭಂದದ ಮೂಲಕ ಆರೋಗ್ಯಪೂರ್ಣ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದು, ಈಗ ಸಮಾಜ ಕಲ್ಯಾಣ ಅಧಿಕಾರಿಯವರನ್ನು ಸ್ವಾಗತಿಸಿ, ಮತ್ತಷ್ಟು ಅವರಿಂದ ಸಮಾಜಮುಖಿ ಕಾರ್ಯ ಆಗಲಿ ಎಂಬ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ..
ಈ ಸಂಧರ್ಭದಲ್ಲಿ ಯಲ್ಲಪ್ಪ ಹುದಲಿ, ಸಂತೋಷ ಕಾಂಬ್ಳೆ, ಇನ್ನಿತರ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು..