ಬೆಳಗಾವಿ:ಅಗಸಗಾ ಗ್ರಾಮದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

Share the Post Now

ಮಧ್ಯಾಹ್ನ ತ್ರಿವರ್ಣ ಧ್ವಜ ಹಾರಾಟರಾಷ್ಟ್ರಧ್ವಜ ಸಂಹಿತೆ ಉಲ್ಲಂಘಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಗಸಗಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೌಕರರು ಮಧ್ಯಾಹ್ನ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ಮಾಡುವ ಬದಲು ಮಧ್ಯಾಹ್ನ ಹಾರಿಸಲಾಯಿತು. ಮಧ್ಯಾಹ್ನ 1.41ಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಳೆ ಧ್ವಜ ತೆಗೆದು ಹೊಸ ಧ್ವಜಾರೋಹಣ ಮಾಡಿದರು. ಇದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ.

ಧ್ವಜಾರೋಹಣ ನೆರವೇರಿಸಿದ ಯೋಧ ಕಳೆದ ನಾಲ್ಕು ತಿಂಗಳ ಹಿಂದೆ ರಾಷ್ಟ್ರಧ್ವಜ ಬದಲಿಸುವಂತೆ ಗ್ರಾಪಂ ಪಿಡಿಒಗೆ ತಿಳಿಸಿದ್ದರು. ಆದರೆ ಅಗಸಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎನ್.ಎ.ಮುಜಾವರ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿ ಧ್ವಜ ಬದಲಾಯಿಸುವಂತೆ ಕಂಪ್ಯೂಟರ್ ಆಪರೇಟರ್ ಮಹೇಶ ಹಂಪನ್ನವರ್

ಅವರಿಗೆ ಯೋಧ ಸೂಚಿಸಿದರು. ಅವರ ಪ್ರಕಾರ, ಮಧ್ಯಾಹ್ನ ಧ್ವಜವನ್ನು ಬದಲಾಯಿಸಲಾಯಿತು ಎಂದು ಯೋಧ ಮಾಹಿತಿ ನೀಡಿದರು. ಕೆಲವು ನೌಕರರನ್ನು ಬಿಟ್ಟರೆ ಗ್ರಾಮ ಪಂಚಾಯಿತಿಗೆ ಅಧಿಕಾರಿಗಳಿಲ್ಲ. ಇದೇ ವೇಳೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೈಗೊಂಡಿರುವ ಕ್ರಮದತ್ತ ಎಲ್ಲರ ಗಮನ ನೆಟ್ಟಿದೆ.

Leave a Comment

Your email address will not be published. Required fields are marked *

error: Content is protected !!