ಡಾಲ್ಬಿ (ಡಿಜೆ) ಸೌಂಡ್ ಗೆ ಕುಣಿದು ಕುಪ್ಪಳಿಸಿದ ರಾಯಣ್ಣರ ಹುಡುಗರು
ರಾಯಣ್ಣ ಮೂರ್ತಿಗೆ ಜಿಸಿಬಿ ಮೇಲೆ ನಿಂತು ಹುಮಳೆ ಸುರಿಸಿದ ಅಭಿಮಾನಿಗಳು
ವರದಿ: ಸಂತೋಷ ಮುಗಳಿ
ಬೆಳಗಾವಿ :ಮುಗಳಖೋಡ: ಪಟ್ಟಣದ ರಾಯಣ್ಣ ಅಭಿಮಾನಿ ಬಳಗದಿಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.
ಮುಗಳಖೋಡ ಕ್ರಾಸನಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನಿಡಿ, ಸಮುಮಾರು 100 ಕ್ಕೂ ಹೆಚ್ಚಿನ ಟ್ರ್ಯಾಕ್ಟರ ಹಾಗೂ ಡಾಲ್ಬಿ(ಡಜೆ), ಡೊಳ್ಳು ಕುಣಿತದ ಮೂಲಕ ರಾಯಣ್ಣರ ಮೂರ್ತಿ ಮತ್ತು ಭಾವಚಿತ್ರದೊಂದಿಗೆ ಮೆರವಣಿಗೆ ಆರಂಭಗೊಂಡು ನಂತರ ವಿವೇಕಾನಂದ ವೃತದ ವರೆಗೆ ಸಾಗಿ ಮುಕ್ತಾಯಗೊಂಡಿತು. ಮಾರ್ಗ ಮಧ್ಯ ಬಸ್ ನಿಲ್ದಾಣ ಬಳಿ ಬಂದ ಮೆರವಣಿಯ ಎರಡೂ ಬದಿಗೆ ಜೆಸಿಬಿ ನಿಲ್ಲಿಸಿ ಅದರ ಮೇಲಿಂದ ರಾಯಣ್ಣ ಮೂರ್ತಿ ಹಾಗೂ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿದರು. ಮೆರವಣಿಗೆಯಲ್ಲಿ ನಾಲ್ಕು ತಂಡದವರಿಂದ ಜಿದ್ದಾ ಜಿದ್ದಿ ಡೊಳ್ಳು ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಹಾರೂಗೇರಿಯ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಯವರಿಂದ ಬಿಗಿ ಬಂದು ಬಸ್ತ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಡಾ.ಸಿ.ಬಿ.ಕುಲಿಗೋಡ, ಶಿವಾನಂದ ಮೆಕ್ಕಳಕಿ, ಹಾಲಪ್ಪ ಶೇಗುಣಸಿ, ಸಂತೋಷ ಅರಭಾವಿ, ಮಹಾಂತೇಶ ಕಡಪಟ್ಟಿ, ಗೋಪಾಲ ತೇರದಾಳ, ಕರೆಪ್ಪ ಮಂಟೂರ, ಅಶೋಕ ಖೇತಗೌಡರ, ಸಾಗರ ತೂಗದಲಿ, ಮದೂಸುದನ ಬಿಳಗಿ, ಮಾರುತಿ ಹಿಪ್ಪರಗಿ ಭೀಮಶಿ ಬನಶಂಕರಿ, ಮುರೇಪ್ಪ ಶೇಗುಣಸಿ, ಶಿವಾನಂದ ಗೋಕಾಕ, ಮಾರುತಿ ಗೋಕಾಕ, ಕುಮಾರ ಕಳಸನ್ನವರ, ಪರಸಪ್ಪ ಹಳ್ಳೂರ, ಅಶೋಕ ಹಳಿಂಗಳಿ, ಶಶಿಕಾಂತ ಶೇಗುಣಸಿ, ಯಲ್ಲಾಲಿಂಗ ಕುರಿಮನಿ ಹಾಗೂ ಎಲ್ಲ ರಾಯಣ್ಣ ಅಭಿಮಾನಿ ಬಳಗದವರು ಹಾಜರಿದ್ದರು.






