ಬೆಳಗಾವಿ :ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಗ್ರಾಮ ಪಂಚಾಯತ ಆವರಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ.
ನೂತನ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಧುಕರ ಸಣ್ಣಕ್ಕಿ ಸಂವಿಧಾನ ಶಿಲ್ಪಿ ಡಾ.ಬಿ.ಆರ.ಅಂಬೇಡ್ಕರ ಹಾಗೂ ಮಹಾತ್ಮಾ ಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸದರೆ, ಅಧ್ಯಕ್ಷೆ ರಫತ ಜಿನ್ನಾಬಡೆ 77ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಕುಡಚಿ ಪಟ್ಟಣದ ಸುಪುತ್ರ ಭಾರತೀಯ ಸೇನೆಯಲ್ಲಿ 17ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕರೆಪ್ಪಾ ದುಂಡಪ್ಪ ಬ್ಯಾಕುಡೆ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಶ್ರೀದೇವಿ ಗುಂಡಾಪುರ, ಶಿಕ್ಷಕಿ ರೇಖಾ ಗುಪ್ತೆ, ಮುಷ್ಪಿಕ ಜಿನ್ನಾಬಡೆ, ಸದಸ್ಯರಾದ ನಿಸಾರ ಬಾಗೆ, ರವುಫ ಚಮನಮಲಿಕ, ಸಾಹೇಬಹುಸೇನ ಚಮನಮಲಿಕ, ಮುಖೀಮ ಮಾರುಫ, ಮಕ್ಸುದ ಖುದಾವಂತ, ಸರ್ವ ಸದಸ್ಯರು, ಗ್ರಾಮ ಪಂಚಾಯತ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.





